ಕಾಠ್ಮಂಡು : ಕಾಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಶೌರ್ಯ ಏರ್ ಲೈನ್ಸ್ ನ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 19 ಮಂದಿಯೂ ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಕಾಠ್ಮಂಡುವಿನ ಪೋಖ್ರಾದಿಂದ ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ ಕೇವಲ ಏರ್ ಲೈನ್ಸ್ ನ ಟೆಕ್ನಿಕಲ್ ಸಿಬಂದಿಗಳು ಮಾತ್ರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ವಿಮಾನದಲ್ಲಿ ಬೇರೆ ಯಾವ ಪ್ರಯಾಣಿಕರು ಇಲ್ಲ ಎಂಬುದಾಗಿ ವರದಿ ವಿವರಿಸಿದ್ದು, ಸಾವಿನ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ತಿಳಿದು ಬರಬೇಕಾಗಿದೆ ಎಂದು TIAನ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.