ಸರ್ವೀಸ್ ರಸ್ತೆಯಲ್ಲಿ ಬಾಕಿಯಾದ ಸರಕು ಲಾರಿ: ಉಪ್ಪಳ ಪರಿಸರದಲ್ಲಿ ಗಂಟೆಗಳ ಕಾಲ ಸಂಚಾರ ಮೊಟಕು

Share with


ಉಪ್ಪಳ: ಖಾಸಾಗಿ ಗೇಟ್‌ನೊಳಗೆ ಪ್ರವೇಶಿಸುತಿದ್ದ ಟೈಲ್ಸ್ ಹೇರಿದ ಲಾರಿಯೊಂದರ ಚಕ್ರ ಹೂತು ಹೋಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಂಡು ಸಾರ್ವಜನಿಕರನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದ ಘಟನೆ ಉಪ್ಪಳ ಪರಿಸರದಲ್ಲಿ  ಜುಲೈ 27ರಂದು ಮಧ್ಯಾಹ್ನ ನಡೆದಿದೆ. ಹಿದಾಯತ್ ನಗರದಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿರುವ  ಖಾಸಾಗಿ ವ್ಯಕ್ತಿಯ ಮನೆಯೊಂದಕ್ಕೆ ಬೃಹತ್ ಲಾರಿಯಲ್ಲಿ ಬಂದ ಟೈಲ್ಸ್ ಇಳಿಸಲು ಲಾರಿ ಗೇಟ್ ನೊಳಗೆ ಪ್ರವೇಶಿಸುವಾಗ ರಸ್ತೆ ಚರಡಿ ಬಳಿ ಮಣ್ಣಿನಲ್ಲಿ ಹಿಂಬದಿಯ ಟಯರ್ ಹೂತು ಹೋಗಿ ಸರ್ವೀಸ್ ರಸ್ತೆಯಲ್ಲಿ ಅಡ್ಡವಾಗಿ ಲಾರಿ ಉಳಿದಿದೆ. ಇದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗದೆ ಹಿದಾಯತ್ ನಗರದಿಂದ ಬಂದ್ಯೋಡು ತನಕ ವಾಹನಗಳ ಸರದಿ ಸಾಲು ಉಂಟಾಗಿದ್ದು,  ತಲಪಾಡಿ ಭಾಗಕ್ಕೆ ಸಾಗುವ ಬಸ್ ಸಹಿತ ವಾಹನಗಳು ಸಂಚಾರ ಮೊಟಕುಗೊಂಡಿದೆ. ಇದರಿಂದ ವಿವಿಧ ಕಡೇಗಳಿಗೆ ತಲುಪುವ ಜನರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಉಂಟಾಗಿದೆ. ಬಳಿಕ ಪೋಲೀಸರು ಹಾಗೂ ಊರವರ ಸಹಾಯದಿಂದ ಕ್ರೆöÊನ್ ಮೂಲಕ ಲಾರಿಯನ್ನು ತೆರವುಗೊಳಿಸಲಾಗಿದೆ. ಉಪ್ಪಳದಲ್ಲಿ ಅರ್ಧಗಂಟೆಗಳ ಕಾಲ ಬ್ಲೋಕ್ ದಿನನಿತ್ಯವಾಗಿದ್ದು, ಆದರೆ ಶನಿವಾರ ನಡೆದ ಸಂಚಾರಮೊಟಕು ಜನರಲ್ಲಿ ಮರೆಯಾಗದಂತಾಗಿದೆ. ಉಪ್ಪಳ ಪೇಟೆಯಲ್ಲಿ ನಡೇಯುತ್ತಿರುವ ಪ್ಲೆöÊ ಓವರ್ ನಿರ್ಮಾಣ ಪೂರ್ತಿಗೊಂಡರೆ ಮಾತ್ರಇಲ್ಲಿ ಉಂಟಾಗುವ ವಾಹನಗಳ ಬ್ಲೋಕ್‌ನಿಂದ ಮುಕ್ತಿ ಹೊಂದ ಬಹುದೆಂದು,  ಅಲ್ಲದೆ ರಸ್ತೆ ಬದಿಯಲ್ಲಿ ವಾಹನಗಳನ್ನು ಇರಿಸಿ ರಸ್ತೆ ತಡೆ ಉಂಟುಮಾಡುವವರ ವಿರುದ್ದ ಕಾನೂನು ಪಾಲಕರು ಕ್ರಮಕ್ಕೆ ಮುಂದಾಗಬೇಕೆAದು ಸಾರ್ವಜನಿಕರು ಒತ್ತಯಿಸಿದ್ದಾರೆ.


Share with

Leave a Reply

Your email address will not be published. Required fields are marked *