ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಿಂದ ಕಳವು: ಬೆರಳಚ್ಚು, ಶ್ವಾನದಳದಿಂದ ತನಿಖೆ

Share with


ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವುಗೈದ ಸಂಬAಧಿಸಿ ಮಂಜೇಶ್ವರ ಪೋಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ. ಇದರಂತೆ ಕಾಸರಗೋಡು ಡಿವೈಎಸ್‌ಪಿ ಸುನಿಲ್ ಕುಮಾರ್, ಮಂಜೇಶ್ವರ ಸಿ.ಐ ಕೆ.ರಾಜೀವ್ ಕುಮಾರ್  ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ತನಿಖೆ ನಡೆಸಿದರು.  ಶ್ವಾನದಳ ಕ್ಷೇತ್ರದಿಂದ ರಸ್ತೆ ತನಕ ತೆರಳಿದೆ. ಒಂದು ಬೆರಳಚ್ಚು ಕೂಡಾ ಪತ್ತೆಯಾಗಿದೆನ್ನಲಾಗಿದೆ.  ಕಳೆದ ಎರಡು ತಿಂಗಳಲ್ಲಿ  ಹಲವು ಮನೆ, ಕ್ಷೇತ್ರ ಕಳವು ನಡೆದಿದೆ.  ಪೋಲೀಸರು ತನಿಖೆ ನಡೆಸುತ್ತಿದ್ದರೂ  ಆರೋಪಿಗಳ ಬಗ್ಗೆ ಯಾವುದೇ ಸುಳಿಯು ಲಭಿಸದಿರುವುದು ಸಾರ್ವಜನಿಕರಲ್ಲಿ ಆತಂಕವನ್ನುoತೂಮಾಡಿದೆ. ಕಳವು ಪ್ರಕರಣದ ತನಿಖೆಯ ಅಂಗವಾಗಿ ಪ್ರತ್ಯೇಕ ತಂಡವನ್ನು  ಈ ಹಿಂದೆ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು  ತಿಳಿದು ಬಂದಿದೆ. ಅಲ್ಲದೆ  ಗಸ್ತು, ವಾಹನ ತಪಾಸಣೆ ನಡೆಸಿ ಸಂಶಯಾಸ್ಪದವಾಗಿ ಕಂಡು ಬಂದ ವ್ಯಕ್ತಿಗಳನ್ನು  ಠಾಣೆಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ.  (ಆರೋಪಿಗಳ ಪತ್ತೆಗೆ ಬಿಜೆಪಿ ಒತ್ತಾಯ: )
ಕೋಳ್ಯೂರು  ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಭಾರತೀಯ ಜನತಾ ಪಕ್ಷ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಗ್ರಹಿಸಿದೆ ಐತಿಹಾಸಿವಾದ ಕ್ಷೇತ್ರವನ್ನು ಅಪವಿತ್ರಗೊಳಿಸಿ ದೇವಸ್ಥಾನದ ಸೊತ್ತುಗಳನ್ನು  ದೋಚುವ ಪ್ರಯತ್ನ ಮಾತ್ರವಲ್ಲ ಇದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಸವಾಲು ಎಂದು ಬಿಜೆಪಿ ಹೇಳಿದೆ.ಪೊಲೀಸರು ನಿಸ್ಕೃಯತೆ ಎದ್ದು ಕಾಣುತಿದೆ ಪೋಲೀಸರ ನಿರಂತರ ವೈಫಲ್ಯ,   ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜಿಪಿ ಇಲಾಖೆಗೆ ಅಗ್ರಹಿಸಿದೆ.ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಲಿ ಕಳ್ಳತನ, ದರೋಡೆ ಪ್ರಕರಣ ಅಧಿಕ ವಾಗುತ್ತಿದೆ.ಇದುವರೆಗೆ ನಡೆದ ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸ್ ಬಂಧಿಸಿಲ್ಲ ಎಂದು ಆರೋಪಿಸಿದೆ.ದೇವಸ್ಥಾನ ಕಳವು ಸ್ಥಳಕ್ಕೆ  ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾ. ಶ್ರೀಕಾಂತ್,ವಿಜಯ ಕುಮಾರ್ ರೈ, ಆದರ್ಶ್ ಬಿ ಎಂ,ಮಣಿಕಂಠ ರೈ ಪದ್ಮನಾಭ ರೈ ಮಿಂಜ, ಸಂತೋಷ ದೈಗೋಳಿ ಕೆ.ವಿ ಭಟ್, ನಾರಾಯಣ ತುಂಗಾ ಮೊದಲದವರು ಬೇಟಿ ನೀಡಿದರು.


Share with

Leave a Reply

Your email address will not be published. Required fields are marked *