ಉಪ್ಪಳ: ವ್ಯಾಪಕಗೊಂಡ ಮಳೆಯಿಂದಾಗಿ ಉಪ್ಪಳ ಹೊಳೆಯಲ್ಲಿ ಭಾರೀ ನೀರು ಉಕ್ಕಿ ಹರಿಯುತ್ತಿದ್ದು, ವಿವಿಧ ಪ್ರಡೇಶದಗಳಲ್ಲಿ ಅಡಿಕೆ ತೋಟಗಳು ಜಲಾವೃತಗೊಂಡು ಅಡಿಕೆ ಕೃಷಿಗೆ ನಾಶಗೊಳ್ಳುವ ಭೀತಿ ಕೃಷಿಕರನ್ನು ಕಾಡುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಪ್ಪಳ ಹೊಳೆ ಸಂಪರ್ಕಿಸುವ ಪೈವಳಿಕೆ , ಮೀಂಜ, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ನೀರು ತುಂಬಿ ಹರಿಯುತ್ತಿರುವುದರಿಂದ ಈ ಪ್ರದೇಶದ ಹಲವಾರು ಅಡಿಕೆ ತೋಟ ಜಲಾವೃತಗೊಂಡಿದೆ. ಪೈವಳಿಕೆ ಪಂಚಾಯತ್‌ನ ಮುನ್ನಿಪ್ಪಾಡಿಯ ಬಾಲಕೃಷ್ಣ ಕುಲಾಲ್, ಪೂವಪ್ಪ ಕುಲಾಲ್, ಮೀಂಜಾ ಪಂಚಾಯತ್‌ನ ದರ್ಬೆ ನಿವಾಸಿಗಳಾದ ವಿಠಲ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುಜಿತ್ ಸಾಮಾನಿ, ವಿಶ್ವನಾಥ ಶೆಟ್ಟಿ, ಮೊಹಮ್ಮದ್ ಹಾಗೂ ಕೊಳಚಪುö್ಪ ನಿವಾಸಿ ದಿನೇಶ ಹಾಗೂ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ದೇರಂಬಳ, ಮಡಂದೂರು ಸಹಿತ ವಿವಿಧ ಪ್ರದೇಶದಲ್ಲಿ ತೋಟಗಳು ಜಲಾವೃತಗೊಂಡಿದ್ದು, ಕೃಷಿ ಹಾನಿಯಾಗುವ ಆತಂಕ ಕೃಷಿಕರನ್ನು ಕಾಡುತ್ತಿದೆ.