ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ನಿಜಕ್ಕೂ ನಮಗೆ ಪ್ರೇರಣೆ, ಸ್ಫೂರ್ತಿಯನ್ನು ನೀಡುತ್ತದೆ. ಇದೀಗ ಅಂತಹದ್ದೇ ಸುಂದರ ವಿಡಿಯೋವೊಂದು ವೈರಲ್ ಆಗಿದ್ದು, ಸಮಾಜ ಸೇವೆ ಮಾಡಲು ಹಣ, ಆಸ್ತಿಯೇ ಬೇಕೆಂದಿಲ್ಲ, ಒಳ್ಳೆಯ ಮನಸ್ಸಿದ್ದರೆ ಸಮಾಜಕ್ಕಾಗಿ ನಾವು ಕೂಡಾ ಪುಟ್ಟ ಅಳಿಲು ಸೇವೆಯನ್ನು ಮಾಡಬಹುದೆಂದು ವಿಕಲ ಚೇತನ ವ್ಯಕ್ತಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಹೌದು ಅವರು ಊರ ಉಸಾಬರಿ ನನಗ್ಯಾಕೆ ಅಂತಾನೂ ಯೋಚನೆ ಮಾಡದೆ ಜೋರಾಗಿ ಸುರಿಯುವ ಮಳೆಯ ನಡುವೆಯೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂದು ರಸ್ತೆಯ ಮೇಲೆ ನೀರು ನಿಲ್ಲದಂತೆ ಶೋಲ್ಡರ್ ಡ್ರೈನ್ ಸ್ವಚ್ಛಗೊಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರ ಈ ಕಾರ್ಯಕ್ಕೆ ನನ್ನದೊಂದು ನಮನʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವ್ಯಕ್ತಿಯಿಂದ ನಾವುಗಳು ಕಲಿಯಬೇಕಾದುದು ತುಂಬಾ ಇದೆʼ ಎಂದು ಹೇಳಿದ್ದಾರೆ.