ಧಾರ್ಮಿಕ ಮುಂದಾಳು ಕಾಸರಗೋಡಿನ‌ ವೆಂಕಟ್ರಮಣ ಹೊಳ್ಳ ದಂಪತಿಗೆ ಸನ್ಮಾನ

Share with

ಕಾಸರಗೋಡು : ನಗರದ ಅತೀ ಪುರಾತನ ಮತ್ತು ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಬಿಇಎಂ ಹೈಯರ್ ಸೆಕೆಂಡರಿ ಶಾಲೆಯ ಎರಡನೇ ಮಹಡಿ ಉದ್ಘಾಟನೆ ಸಂದರ್ಭ ಧಾರ್ಮಿಕ ಮುಂದಾಳು ಕಾಸರಗೋಡಿನ‌ ಕೆ.ಎನ್.ವೆಂಕಟ್ರಮಣ ಹೊಳ್ಳ ದಂಪತಿಯನ್ನು ಶಾಲೆಯ ಸಮಗ್ರ ಅಭಿವೃದ್ಧಿಗೆ ನೇತೃತ್ವ ವಹಿಸಿದಕ್ಕಾಗಿ ಸನ್ಮಾನಿಸಲಾಯಿತು.

ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 60ಕ್ಕೂ ಮಿಕ್ಕ ದೈವ ದೇವಸ್ಥಾನಗಳ ಜೀರ್ಣೋದ್ಧಾರ,ಬ್ರಹ್ಮಕಲಶೋತ್ಸವ‌ ಕಾರ್ಯಗಳಲ್ಲಿ ತೊಡಗಿಸಿಕೊಂಡು ಧಾರ್ಮಿಕ ನಕಾಶೆಯಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷರಾಗಿ ಶಾಲೆಯ ಕಟ್ಟಡ ನಿರ್ಮಾಣ ಹಾಗೂ ಸರ್ವತೋಮುಖ ಅಭಿವೃದ್ಧಿಯಲ್ಲೂ ತೊಡಗಿಸಿಕೊಳ್ಳುವ ಮೂಲಕ ಶೈಕ್ಷಣಿಕ ಕ್ರಾಂತಿಗೂ ಕಾರಣೀಭೂತರಾಗಿದ್ದಾರೆ. ದಶಕಗಳ ಇತಿಹಾಸ ಇರುವ ಶ್ರೀ ವೆಂಕಟ್ರಮಣ ಯಕ್ಷಗಾನ‌ ಬಳಗದ ಅಧ್ಯಕ್ಷರಾಗಿಯೂ ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದಾರೆ.


Share with

Leave a Reply

Your email address will not be published. Required fields are marked *