ವಿಟ್ಲ: ಯುವಕ ನಾಪತ್ತೆ

Share with

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ದಿ.ರಾಮಚಂದ್ರ ಗೌಡರ ಪುತ್ರ ಹೇಮಂತ್ (37) ಜು.22 ರಿಂದ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಸಂಘಕ್ಕೆ ಹಣ ಕಟ್ಟಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟು ಹೋದವರು ಈ ತನಕ ಬಂದಿರುವುದಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಐದೂವರೆ ಅಡಿ ಎತ್ತರ, ಗೋಧಿ ಬಣ್ಣ ಹೊಂದಿರುವ‌ ಅವರು ಕಪ್ಪು ಪ್ಯಾಂಟ್, ಬಿಳಿ ಶರ್ಟ್ ಧರಿಸಿದ್ದರು. ತುಳು , ಕನ್ನಡ ಭಾಷೆ ಮಾತನಾಡುತ್ತಾರೆ.


Share with