ಅಸೌಖ್ಯದಿಂದ ರಾಮತ್ತಮಜಲ್ ನಿವಾಸಿ ನಿಧನ

Share with


ಮಂಜೇಶ್ವರ: ಹೊಸಂಗಡಿ ಬಳಿಯ ರಾಮತ್ತಮಜಲ್ ನಿವಾಸಿ ಚಂದ್ರಶೇಖರ ಆಚಾರ್ಯ [೭೩] ಅಸೌಖ್ಯದಿಂದ  ಜುಲೈ 30ರಂದು ಮುಂಜಾನೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು. ಇವರು ಈ ಮೊದಲು ವಿದೇಶದಲ್ಲಿ ಕಂಪೆನಿಯೊoದರಲ್ಲಿ ಬಡಗಿ ವೃತ್ತಿಯಲ್ಲಿದ್ದು, ಬಳಿಕ ಊರಿಗೆ ಆಗಮಿಸಿ ಹೊಸಂಗಡಿ ಶ್ರೀ ವೀರಭದ್ರ ಕ್ಷೇತ್ರ ಬಳಿಯಲ್ಲಿ ವಿಶ್ವಕರ್ಮ ಸ್ಟೋರ್ ಎಂಬ ಸಂಸ್ಥೆಯನ್ನು ಹೊಂದಿ ಅಡುಗೆ ಪಾತ್ರಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಮೃತರು ಪತ್ನಿ ವೇದಾವತಿ [ ಮಾಜಿ ಅಧ್ಯಕ್ಷೆ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ], ಮಕ್ಕಳಾದ ನಾಗೇಶ ಆಚಾರ್ಯ, ಚೇತನಾ, ಅಳಿಯ ಪ್ರಸನ್ನ ಆಚಾರ್ಯ, ಸೊಸೆ ಅಕ್ಷತಾ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಬಂಗ್ರಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ಗುರು ಸೇವಾ ಪರಿಷತ್, ಸ್ವಸ್ತಿಕ್ ಫ್ರೆಂಡ್ಸ್ ಶ್ರೀ ವೀರಭದ್ರ ದೇವಸ್ಥಾನ ಬಳಿ, ಸಂತಾಪ ಸೂಚಿಸಿದ್ದಾರೆ. ಸಹೋದರಿ ಶೀಲಾ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.


Share with

Leave a Reply

Your email address will not be published. Required fields are marked *