ಮಳೆಯಿಂದ ಹಾನಿಯಾದ ಬಂಟ್ವಾಳದ ಕೆಲವು ಪ್ರಮುಖ ಸ್ಥಳಗಳಿಗೆ ಬಿಜೆಪಿ ವಿಪಕ್ಷ ನಾಯಕ ಆರ್.ಆಶೋಕ್ ಬೇಟಿ ನೀಡಿದರು.ಬಂಟ್ವಾಳ ಬಡ್ಡಕಟ್ಟೆ, ನಾವೂರ ಹಾಗೂ ಜಕ್ರಿಬೆಟ್ಟು ಡ್ಯಾಂಗೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ ಜೊತೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು.
ನದಿ ತೀರದ ಮುಳುಗಡೆ ಪ್ರದೇಶಗಳಿಗೆ ಹೋಗಿ ಪರಿಶೀಲನೆ ನಡೆಸಿ,ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್, ಎಂ.ಎಲ್.ಸಿ.ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್,ಬಿಜೆಪಿ ಪ್ರಮುಖರಾದ ಪೂಜಾ ಪೈ,ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ, ಅಕ್ಷಿತ್ ಸುವರ್ಣ, ದಿನೇಶ್ ಅಮ್ಟೂರು, ಗೋವಿಂದ ಪ್ರಭು, ಆರ್.ಸಿ.ನಾರಾಯಣ, ರಾಮ್ ದಾಸ ಬಂಟ್ವಾಳ, ದೇವದಾಸ ಬಂಟ್ವಾಳ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಆನಂದ ಶಂಭೂರು, ಪುಷ್ಪರಾಜ ಚೌಟ, ರಶ್ಮಿತ್ ಶೆಟ್ಟಿ, ಸಂತೋಷ್ ರಾಯಿಬೆಟ್ಟು, ಕಾರ್ತಿಕ್ ಬಲ್ಲಾಳ್, ಯಶವಂತ ನಗ್ರಿ,ಯಶೋಧರ ಕರ್ಬೆಟ್ಟು, ಪ್ರಕಾಶ್ ಅಂಚನ್ ,ಸಂಜೀವ ಪೂಜಾರಿ,ಸುರೇಶ್ ಕುಲಾಲ್, ಹರೀಶ್ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.