ಸೆಲ್ಫಿ ಮೋಜು ಹೇಗೆಲ್ಲ ಪ್ರಾಣಕ್ಕೆ ಅಪಾಯ ತರುತ್ತದೆ ನೋಡಿ! ಹೌದು, ಮಹಾರಾಷ್ಟ್ರದ ಬೋರ್ನ್ ಘಾಟ್‌ಗೆ ತೆರಳಿದ್ದ ಸ್ನೇಹಿತರು ಅಲ್ಲಿನ ಕಣಿವೆಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ.
ಈ ಪೈಕಿ ಯುವತಿಯೊಬ್ಬಳು 150 ಅಡಿ ಪ್ರಪಾತಕ್ಕೆ ಕಾಲು ಜಾರಿ ಬಿದ್ದಿದ್ದಾಳೆ. ಸಮೀಪದಲ್ಲೇ ಇದ್ದ ಶಿವೇಂದ್ರ ರಾಜೇ ರಕ್ಷಣಾ ತಂಡ ಆಕೆಯನ್ನು ರಕ್ಷಣೆ ಮಾಡಿದೆ. ಘಾಟ್‌ನಲ್ಲಿ ಆಗಾಗ್ಗೆ ಇಂತಹ ಅವಘಡಗಳು ಸಂಭವಿಸುವುದರಿಂದ ಶಿವೇಂದ್ರ ರಾಜೇ ತಂಡ ಕಳೆದ ತಿಂಗಳು ಡೆಹ್ರಾಡೂನ್‌ನಲ್ಲಿ ತರಬೇತಿ ಪಡೆದಿತ್ತು.