ಮುಡಾ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಇಂದು 2ನೇ ನೋಟಿಸ್ ಕಳುಹಿಸಲಿದ್ದಾರೆ ಎಂದು ವರದಿಯಾಗಿದೆ.
ರಾಜ್ಯಪಾಲರ ಸಮಾವೇಶಕ್ಕಾಗಿ ದೆಹಲಿಗೆ ತೆರಳಿದ್ದ ಗೆಹ್ಲೋಟ್ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಸಚಿವ ಸಂಪುಟ ನೀಡಿರುವ ಸ್ಪಷ್ಟಿಕರಣಕ್ಕೆ ರಾಜ್ಯಪಾಲರು ಅತೃಪ್ತಿ ಸೂಚಿಸಿದ್ದಾರೆ. 2ನೇ ನೋಟಿಸ್ ಜಾರಿ ಬಳಿಕ ಕಾನೂನು ಸಮರ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ.