ಉಪ್ಪಳ: ದೇರಂಬಳ ಹೊಳೆಯ ಕಾಲು ಸಂಕ ಕುಸಿದ ಬಳಿಕ ಊರವರು ತಾತ್ಕಾಲಿಕವಾಗಿ ಕಂಗಿನಿAದ ನಿರ್ಮಿಸಿದ ದಾರಿ ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ.ಇದರಿಂದ ಮಂಗಲ್ಪಾಡಿ-ಮೀAಜ ಪಂಚಾಯತ್‌ಗೆ ಸಂಪರ್ಕ ಪೂರ್ತಿ ಕಡಿತಗೊಂಡಿರುವುದರಿAದ ವಿದ್ಯಾರ್ಥಿಗಳು, ಕೃಷಿಕರ ಸಹಿತ ನೂರಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ದೇರಂಬಳ, ಚಿಗುರುಪಾದೆ ಸಹಿತ ಪರಿಸರದ ನಿವಾಸಿಗಳಿಗೆ ಬೇಕೂರು, , ಪೈವಳಿಕೆ, ಜೋಡುಕಲ್ಲು ಸಹಿತ ವಿವಿಧ ಪ್ರದೇಶದ ಶಾಲೆ, ಹಾಲಿನ ಡಿಪ್ಪೊ, ಸಹಿತ ಇತರ ಅಗತ್ಯದ ಕೆಲಸಗಳಿಗೆ ಹಾಗೂ ಜೋಡುಕಲ್ಲು, ಮಡಂದೂರು ಸಹಿತ ಇತರ ಪ್ರದೇಶದ ಜನರಿಗೆ ಮೀಯಪದವು, ಚಿಗುರುಪಾದೆ ಮೊದಲಾದ ಕಡೆಗಳಿಗೆ ಹತ್ತಿರದ ದಾರಿಯಾಗಿಯಾಗಿದ್ದು, ಇದೀಗ ಇದ್ದ ತಾತ್ಕಾಲಿಕ ಸಂಕವೂ ಇಲ್ಲದಾಗಿರುವುದರಿಂದ ಸುಮಾರು ೧೦ರಿಂದ ಅಧಿಕ ಕಿಲೋ ಮೀಟರ್ ಸುತ್ತು ಸಂಚರಿಸಿ ಈ ಪ್ರದೇಶಗಳಿಗೆ ತಲುಪಬೇಕಾದ ಅವಸ್ಥೆ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಸಂಕ ಕುಸಿದು ಹಲವಾರು ತಿಂಗಳು ಕಳೆದರೂ ಮರು ನಿರ್ಮಾಣಕ್ಕೆ ಕ್ರಮಕೈಗೊಳ್ಳದೆ ಇರುವುದು ಇಲ್ಲಿನ ಸ್ಥಳೀಯರು ಭಾರೀ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅಧಿಕಾರಿಗಳಿಗೆ ಊರವರು ನಿರಂತರ ಮನವಿಯನ್ನು ನೀಡಿದರೂ ಸಂಕ ನಿರ್ಮಾಣದ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಳ್ಳಲಿಲ್ಲವೆಂದು ದೂರಲಾಗಿದೆ. ಸಂಬoಧಪಟ್ಟ ಅಧಿಕಾರಿಗಳ ವರ್ಗ ಕೂಡಲೇ ತಾತ್ಕಾಲಿಕವಾಗಿ ಜನರ ನಡಿಗೆಗೆ ಹಾಗೂ ವ್ಯವಸ್ಥಿತ ಸೇತುವೆಯನ್ನು ನಿರ್ಮಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಊರವರು ಒತ್ತಾಯಿಸಿದ್ದಾರೆ.