ಬಾಯಾರು: ಬಳ್ಳೂರು ನಿವಾಸಿ ಮರದ ಕೆಲಸಗಾರ ದಾಮೋದರ ಆಚಾರ್ಯ [೯೩] [ ಇಂದು] ಆಗಸ್ಟ್ 7ರಂದು ಮುಂಜಾನೆ 2.30 ರ ವೇಳೆ ಉಪ್ಪಳದ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ರಾತ್ರಿ ಅಸೌಖ್ಯ ಉಂಟಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಬಾಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಬಂಗ್ರಮ0ಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ಸಮಿತಿಯ ಹಿರಿಯ ಸದಸ್ಯರಾಗಿದ್ದಾರೆ. ಮೃತರು ಮಕ್ಕಳಾದ ರಾಮಚಂದ್ರ ಆಚಾರ್ಯ, ಹೇಮಾವತಿ, ಕೃಷ್ಣ ಆಚಾರ್ಯ, ಯಮುನ, ಗೀತಾ, ಸುಬ್ರಹ್ಮಣ್ಯ ಆಚಾರ್ಯ, ಸೊಸೆಯಂದಿರಾದ ಪ್ರಪುಲ್ಲ, ಹೇಮಾವತಿ, ರಜನಿ, ಅಳಿಯಂದಿರಾದ ನಾಗೇಶ ಆಚಾರ್ಯ ಪುತ್ತಿಗೆ, ಮೋಹನ ಆಚಾರ್ಯ ಪುತ್ತೂರು ಸಹೋದರ ವೆಂಕಟ್ರಮಣ ಆಚಾರ್ಯ, ಸಹೋದರಿ ಪಾರ್ವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಭವಾನಿ ಈ ಹಿಂದೆ ನಿಧನರಾಗಿದ್ದಾರೆ.