ಭಾರತದ ನೀರಜ್ ಚೋಪ್ರಾಗೆ ಬೆಳ್ಳಿ

Share with

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್‌ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರೀ ಪೈಪೋಟಿಯಿಂದ ಕೂಡಿದ್ದ ಫೈನಲ್‌ನಲ್ಲಿ ಚೋಪ್ರಾ 89.45 ಮೀ. ದೂರ ಎಸೆದರು. 6 ಸುತ್ತುಗಳಲ್ಲಿ 5 ಬಾರಿ ಅವರು ಫೌಲ್ ಆಗಿದ್ದೇ ದೊಡ್ಡ ಹಿನ್ನಡೆಯಾಯಿತು.

ಆದರೆ, ಪಾಕಿಸ್ತಾನದ ಅರ್ಷದ್‌ ನದೀಮ್ 92.97 ಮೀ. ದೂರ ಎಸೆದು ಒಲಿಂಪಿಕ್ ದಾಖಲೆ ಸೃಷ್ಟಿಸಿದರಲ್ಲದೆ, ಚಿನ್ನದ ಪದಕ ಗೆದ್ದರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ 88.54 ಮೀ. ಎಸೆದು ಕಂಚಿನ ಪದಕ ಗೆದ್ದರು.


Share with