ಪುತ್ತೂರು : ವೇಗದ ಜಗತ್ತಿನಲ್ಲಿ, ಯಶಸ್ಸನ್ನು ಸಾಧಿಸಬೇಕಾದರೆ ಪರಿಣಾಮಕಾರಿ ಸಂವಹನವು ಅತ್ಯವಶ್ಯ. ಪರಿಣಾಮಕಾರಿ ಸಂವಹನವು
ಪ್ರತೀ ಕ್ಷೇತ್ರದಲ್ಲೂ ಅಗತ್ಯವಿದ್ದು, ಪ್ರತಿಯೊಬ್ಬನ ವ್ಯಕ್ತಿತ್ವ ವಿಕಸನಕ್ಕೆ ಮಾತ್ರವಲ್ಲದೆ ಮುಖ್ಯವಾಗಿ ವೃತ್ತಿ ಕ್ಷೇತ್ರದ
ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂವಹನ ಕಲೆಯನ್ನು ಜಾಗೃತ ಗೊಳಿಸುವ ಉದ್ದೇಶದೊಂದಿಗೆ, ಅಕ್ಷಯ ಕಾಲೇಜು
ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ
ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರವು
ದಿನಾಂಕ ,07 ಆಗಸ್ಟ್ 2024, ಬುಧವಾರದಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಶ್ರೀಮತಿ ರಶ್ಮಿ, ಇಂಗ್ಲಿಷ್ ವಿಭಾಗ ಮುಖ್ಯಸ್ಥರು, ಅಕ್ಷಯ ಕಾಲೇಜ್ ಪುತ್ತೂರು
ಇವರು ವಿದ್ಯಾರ್ಥಿಗಳಿಗೆ “COMMUNICATION BARRIERS” ಎನ್ನುವ ವಿಷಯದಲ್ಲಿ ತರಬೇತಿ
ಕಾರ್ಯಗಾರವನ್ನು ನಡೆಸಿಕೊಟ್ಟರು.
ಸರಳವಾಗಿ ಮತ್ತು ನಿರಾತಂಕವಾಗಿ ಮಾತನಾಡುವಲ್ಲಿ ವಿದ್ಯಾರ್ಥಿಗಳು ಎದುರಿಸುವ ಅಡಚಣೆಗಳನ್ನು ಚಟುವಟಿಕೆಗಳು
ಹಾಗೂ ಗುಂಪು ಚರ್ಚೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
“ವಿಚಾರ ವಿನಿಮಯದಲ್ಲಿ ಭಾಷೆಯು ಯಾವುದೆಂಬುವುದು ಪ್ರಾಮುಖ್ಯತೆಯಲ್ಲ, ಬದಲಾಗಿ ಮಾತನಾಡುವ ಶೈಲಿ,
ಹಾವಭಾವ ಹೆಚ್ಚು ಮಹತ್ವವನ್ನು ಪಡೆದಿದೆ” ಎಂಬುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಅಕ್ಷಯ ಎಜುಕೇಶನಲ್ ಅಂಡ್
ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ಇವರು ಮಾತನಾಡುತ್ತಾ, “ಅಕ್ಷಯ ಕಾಲೇಜಿನಲ್ಲಿ
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗಿ ಹಮ್ಮಿಕೊಳ್ಳುವ ಅನೇಕ ಕಾರ್ಯಕ್ರಮಗಳನ್ನು ಸದುಪಯೋಗ
ಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು” ಎಂದು ತಿಳಿಸಿದರು.
ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಸಕಿ ಧನ್ಯಶ್ರಿ ಇವರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗ ಉಪನ್ಯಾಸಕರು
ಮತ್ತು ಪ್ರಥಮ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.