ಉಪ್ಪಳ: ಗಲ್ಪ್ ನಿಂದ ಒಂದು ವಾರದ ಹಿಂದೆಯಷ್ಟೆ ಊರಿಗೆ ತಲುಪಿದ ವ್ಯಕ್ತಿಯೋರ್ವರು ಹೃದಯಘಾತದಿಂದ ನಿಧನರಾಗಿದ್ದಾರೆ. ಉಪ್ಪಳ ಭಗವ ತೀ ಗೇಟ್ ಬಳಿಯ ನಿವಾಸಿ ಚಾಲಕ ಪ್ರಕಾಶ್ [60] ನಿಧನರಾದರು. ಇವರಿಗೆ ಭಾನುವಾರ ರಾತ್ರಿ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಹಲವು ವರ್ಷಗಳಿಂದ ಗಲ್ಫ್ ನಲ್ಲಿ ಕಂಪೆನಿಯೊoದರಲ್ಲಿ ಚಾಲಕರಾಗಿದ್ದರು. ಒಂದು ವಾರದ ಹಿಂದೆಯಷ್ಟೆ ಊರಿಗೆ ಆಗಮಿಸಿದ್ದರು. ಮೃತರು ಪತ್ನಿ ಸುಜಾತ, ಪುತ್ರ ಲಖನ್, ಅಳಿಯ ಪ್ರದೀಪ್ ಪಳ್ಳಿಕೆರೆ, ಸಹೋದರ, ಸಹೋದರಿಯರಾದ ಕೃಷ್ಣ, ದಾಮೋದರ, ರಾಣಿ ಕುಮಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಐತ್ತಪ್ಪ ತಾಯಿ ಪದ್ಮಾವತಿ. ಪುತ್ರಿ ತೇಜಸ್ವಿನಿ ಈ ಹಿಂದೆ ನಿಧನರಾಗಿದ್ದಾರೆ.