ಉಪ್ಪಳ: ಉಪ್ಪಳ ಹೊಳೆಯ ದೇರಂಬಳದಲ್ಲಿ ಸೇತುವೆ ಕುಸಿದು ಬಿದ್ದ ಬಳಿಕ ಊರವರು ನಿರ್ಮಿಸಿದ ಕಂಗಿನ ಕಾಲ್ನಡಿಗೆ ಸಂಕ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು. ಇದರಿಂದ ಜೋಡುಕಲ್ಲು ಸಹಿತ ವಿವಿಧ ಪ್ರದೇಶಕ್ಕೆ ನೂರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಾಲು, ಬೀಡಿ ಬ್ರಾಂಚ್ ಸಹಿತ ಕೆಲಸ ಕಾರ್ಯಗಳಿಗೆ ತೆರಳುವ ನೂರಾರು ಮಂದಿಗೆ ಸಂಚಾರ ಮೊಟಕುಗೊಂಡು ಸಂಕಷ್ಟಕ್ಕೀಡಾಗಿದ್ದರು. ಇದನ್ನು ಗಮನಿಸಿದ ದೇರಂಬಳದ ಸುಮಾರು ೧೫ರಷ್ಟು ಯುವಕರ ತಂಡ ತಮ್ಮ ಕೆಲಸಗಳನ್ನು ಬದಿಗಿಟ್ಟು ಸೋಮವಾರ ಬೆಳಿಗ್ಗಿನಿಂದ ಸಂಜೆ ತನಕ ಮತ್ತೆ ಕಂಗಿನಿoದ ಬೃಹತ್ ಕಾಲು ಸಂಕ ವನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.ಸ್ಥಳೀಯ ತೋಟದ ಮಾಲಿಕರು ನೀಡಿದ ೩೦ ರಷ್ಟು ಕಂಗು ಉಪಯೋಗಿಸಿ ತಾತ್ಕಾಲಿಕ ಕಾಲು ಸಂಕ ವನ್ನು ನಿರ್ಮಿಸಲಾಗಿದೆ. ಇದರಿಂದ ದೇರಂಬಳ, ಚಿಗುರುಪಾದೆ, ಬುಡ್ರಿಯಾ ಕಲ್ಲಗದ್ದೆ, ತೊಟ್ಟೆತ್ತೋಡಿ ಪ್ರದೇಶದಿಂದ ಹಲವಾರು ಮಕ್ಕಳು ಬೇಕೂರು. ಪೈವಳಿಕೆ, ಮಂಗಳೂರು ಶಾಲಾ, ಕಾಲೇಜುಗಳಿಗೆ ಹಾಗೂ ಜೋಡುಕಲ್ಲು, ಮಡಂದೂರು ಸಹಿತ ಇತರ ಕಡೆಗಳಿಂದ ಮೀಯಪದವು, ಚಿಗುರುಪಾದೆ ಮೊದಲಾದ ಕಡೇಗಳಿಗೆ ತೆರಳಲು ಸಹಕಾರಿಯಾಗಿದೆ. ಈ ಹೊಳೆಯ ಸೇತುವೆ ಕುಸಿದು ಬಿದ್ದು ಹಲವಾರು ತಿಂಗಳು ಕಳೆದಿದ್ದು, ಹಲವು ಭಾರಿ ಊರವರು ಶಾಶ್ವತ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗುತಿಲ್ಲವೆoದು ಆರೋಪ ಉಂಟಾಗಿದೆ. ಈ ಹಿನ್ನೆಲೆ ಸ್ಥಳೀಯರು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆನನ್ನ ಲಾಗಿದೆ.