ಕುಂಬಳೆ: ಮುಜಂಗಾವು ಕಾವೇರಿ ಸ್ವಸಹಾಯ ಸಂಘ ಇದರ ಆಶ್ರಯದಲ್ಲಿ 18ನೆ ವರ್ಷದ ವರಮಹಾಲಕ್ಷ್ಮೀ ವೃತ ಪೂಜೆ ಆ.16ರಂದು ಬೆಳಿಗ್ಗೆ 9 ಗಂಟೆಗೆ ಮುಜಾಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಜರಗಲಿದೆ.
ಬೆಳಿಗ್ಗೆ 9 ಗಂಟೆಗೆ ಪೂಜೆ ಪ್ರಾರಂಭಗೊಂಡು 12 ಗಂಟೆಯವರೆಗೆ ನಡೆಯಲಿದ್ದು ಬಳಿಕ ಮಹಾಮಂಗಳಾರತಿ ನೆರವೇರಲಿದೆ.
ವರಮಹಾಲಕ್ಷ್ಮೀ ಪೂಜೆ ಮಾಡಲಿಚ್ಚಿಸುವವರು 101- ನೀಡಿ ರಶೀದಿ ಪಡೆಯಬಹುದಾಗಿದೆ. ಪೂಜೆಯಲ್ಲಿ ಪಾಲ್ಗೊಳ್ಳುವವರು ಗೋಧಿಯು ಆಹಾರವನ್ನು ಸೇವಿಸಬೇಕು. ಜೊತೆಗೆ ದೇವಾಲಯಕ್ಕೆ ಬರುವವರು ಹೂ ಹಣ್ಣುಕಾಯಿ ತರಬೇಕು. ವರಮಹಾಲಕ್ಷ್ಮೀ ಪೂಜೆಯಲ್ಲಿ ಎಲ್ಲ ಭಕ್ತಾಧಿಗಳು ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9895261391