ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಏಲಬೆ ಎಂಬಲ್ಲಿ ದಿವಂಗತ ಲಿಂಗಪ್ಪ ಪೂಜಾರಿ ಇವರ ಸ್ಮರಣಾರ್ಥ ಕುಟುಂಬಸ್ಥರಿಂದ ನೂತನವಾಗಿ ನಿರ್ಮಿಸಿದ ಬಸ್ಸು ತಂಗುದಾನವನ್ನು ಲೋಕಾರ್ಪಣೆ ಮಾಡಲಾಯಿತು.
ಬಸ್ಸು ತಂಗುದಾನದ ಲೋಕಾರ್ಪಣೆಮಾಡಿದ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಏಲಬೆ, ದಿವಂಗತ ಲಿಂಗಪ್ಪ ಪೂಜಾರಿ ಯವರ ನೆನಪು ಶಾಶ್ವತವಾಗಿ ಉಳಿಯಲು ಕುಟುಂಬಸ್ಥರಿಂದ ನಿರ್ಮಿಸಲಾದ ಈ ಬಸ್ಸು ತಂಗುದಾನ ಸಹಕಾರಿಯಾಗಿದೆ ಎಂದರು.
ಬಸ್ಸು ತಂಗುದಾನದ ನಾಮಫಲಕವನ್ನು ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾದ ಉಮೇಶ್ ಬೋಳಂತುರು ಆವರಣಗೊಳಿಸಿದರು,
ಈ ಸಂದರ್ಭದಲ್ಲಿ ದ ಕ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಪುರುಷೋತ್ತಮ ಸಾಲಿಯನ್, ರೊಟೇರಿಯನ್ ಪ್ರಕಾಶ್ ಕಾರಂತ್, ನರಿಕೊಂಬು ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ವಿನುತ ಪುರುಷೋತ್ತಮ್, ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷರಾದ ಕಿರಣ್ ಏಲಬೆ, ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿಯಾಗಿರುವ ಸುರೇಶ್ ಕೋಟ್ಯಾನ್, ಪದ್ಮನಾಭ ಮಯ್ಯ ಏಲಬೆ, ಅಲ್ಫಾoಸ್ ಮ್ಯಾನೇಜೆಸ್, ಆಲ್ಬರ್ಟ್ ಮ್ಯಾನೇಜೆಸ್, ವಿಶ್ವನಾಥ ಕೊಡಂಗೆ ಕೋಡಿ, ಮಹಮಾಯಿ ಮಹಿಳಾ ಮಂಡಲದ ಅಧ್ಯಕ್ಷರಾದ ವಿನಯ ದಿಂಡಿಕೆರೆ, ದಿವಂಗತ ಲಿಂಗಪ್ಪ ಪೂಜಾರಿ ಅವರ ಮಕ್ಕಳಾದ ಮೋಹನ ಪೂಜಾರಿ ಏಲಬೆ, ಸುಂದರ ಪೂಜಾರಿ ಏಲಬೆ, ತಾರನಾಥ ಏಲಬೆ, ಮತ್ತು ಕುಟುಂಬಸ್ಥರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.