ಅಕ್ಷಯ ಕಾಲೇಜಿನಲ್ಲಿ 78 ನೇ  ಸ್ವಾತಂತ್ರ್ಯೋತ್ಸವ

Share with


ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ಶ್ರೀ  ಸುಂದರ ಗೌಡ,ನಿವೃತ್ತ ಸೈನಿಕ  ಧ್ವಜಾರೋಹಣ ಮಾಡಿದರು. ಸಮಾರಂಭದಲ್ಲಿ  ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು   ಸ್ವಾತಂತ್ರ್ಯಹೋರಾಟ ದಲ್ಲಿ  ತ್ಯಾಗ, ಬಲಿದಾನ ಮಾಡಿದ  ಗಾಂಧೀಜಿ,ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಭಗತ್ ಸಿಂಗ್, ಇತರ  ಮಹನೀಯರ ನ್ನು  ಈ ಸಂದರ್ಭದಲ್ಲಿ ಸ್ಮರಿಸಬೇಕು.  ಸ್ವಾತಂತ್ರ್ಯ  ಹೋರಾಟದಲ್ಲಿ  ಅವರ ನಿಸ್ವಾರ್ಥ ಸೇವೆ, ಅವರ ದೇಶ ಪ್ರೇಮ ನಮಗೆಲ್ಲರಿಗೂ ಆದರ್ಶ.  ಪ್ರಸ್ತುತ  ಸಮಾಜದಲ್ಲಿ ನಡೆಯುತ್ತಿರುವ  ಭಯೋತ್ಪಾದನಾ ಚಟುವಟಿಕೆ, ಭ್ರಷ್ಟಾಚಾರ, ಕೋಮು ಗಲಭೆಗಳು ಸಮಾಜದ  ಶಾಂತಿಯುತ ಬದುಕಿಗೆ ಮಾರಕವಾಗಿದೆ . ಈ  ನಿಟ್ಟಿನಲ್ಲಿ  ಯುವ ಸಮೂಹ ಜಾಗೃತರಾಗ ಬೇಕು  ಮಾತ್ರವಲ್ಲದೆ  ಯುವ ಜನತೆ ರಾಷ್ಟ್ರ ಸಂರಕ್ಷಣೆಯಲ್ಲಿ  ಸೈನ್ಯವನ್ನು  ಸೇರಲು  ಉತ್ಸಾಹ ತೋರಿಸಬೇಕು  ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  
ಕಾಲೇಜಿನ ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ ರವರು   ‘2047 ರಲ್ಲಿ ವಿಕಸಿತ ಭಾರತ  ನಮ್ಮ ಗುರಿ’  ಎಂಬ  ನಮ್ಮ ಪ್ರಧಾನ ಮಂತ್ರಿಯವರ  ಆಶಯ ವನ್ನು ಈಡೇರಿಸುವಲ್ಲಿ   ನಾವೆಲ್ಲರೂ  ಪಣ ತೊಟ್ಟು ದುಡಿಯ ಬೇಕಾಗಿದೆ. ನಾವು ನಮ್ಮ  ಕರ್ತವ್ಯವನ್ನು  ಯಥಾವತ್ತಾಗಿ ಮಾಡಿದರೆ ; ವಿದ್ಯಾರ್ಥಿಗಳು  ತಮ್ಮ ಜೀವನದಲ್ಲಿ ಹಿರಿಯರನ್ನು  ಗೌರವಿಸಿ , ಅವರ ಕೆಲಸ  ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ  , ಉತ್ತಮ ಕಲಿಕೆ  ಮತ್ತು ಸುಸಂಸ್ಕೃತ ಜೀವನ ನಡೆಸಿದರೆ ನಮ್ಮ  ಜೀವನ ಸಾರ್ಥಕ ಎಂದು  ತಿಳಿಸಿದರು .  
ಕಾರ್ಯಕ್ರಮ ದಲ್ಲಿ   ಕಾಲೇಜಿನ   ವ್ಯವಸ್ಥಾಪಕ ನಿರ್ದೇಶಕಿ  ಶ್ರೀಮತಿ  ಕಲಾವತಿ ಜಯಂತ್  ನಡುಬೈಲ್  , ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ.  ಎ. ಉಪಸ್ಥಿತರಿದ್ದರು. ತೃತೀಯ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿ ಕೀರ್ತನ್  ಸ್ವಾಗತಿಸಿ,    ತೃತೀಯ      ಫ್ಯಾಷನ್   ಡಿಸೈನ್  ವಿಭಾಗದ  ವಿದ್ಯಾರ್ಥಿನಿ ಕುಮಾರಿ  ದೀಕ್ಷಾ   ವಂದಿಸಿ,  ತೃತೀಯ ವಾಣಿಜ್ಯ ವಿಭಾಗದ ಕುಮಾರಿ ಅಂಜಲಿ  ಕಾರ್ಯಕ್ರಮವನ್ನು ನಿರೂಪಿಸಿದರು.


Share with

Leave a Reply

Your email address will not be published. Required fields are marked *