ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ಜರಾಗಿತು
ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಧ್ವಜಾರೋಹಣ ವನ್ನು ನೆರವೇರಿಸಿದರು
ಮಕ್ಕಳಿಂದ ಪ್ರಾರ್ಥನ ಗೀತೆ ,ಧ್ವಜ ಗೀತೆ, ದೇಶಭಕ್ತಿ ಗೀತೆ, ಮೂಡಿಬಂದು ಮನಸ್ಸೇಳೆಯುವ ಕವಾಯತು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತುಗಳಾಡಿದರು
ಶಾಲಾ ವಿದ್ಯಾರ್ಥಿಗಳು ಮಕ್ಕಳ ಪೋಷಕರು , ಶಾಲಾ ಅಭಿಮಾನಿಗಳು ಹಿರಿಯ ವಿದ್ಯಾರ್ಥಿಗಳು, ವಿವಿಧ ಘೋಷಣೆಗಳೊಂದಿಗೆ ಪುರ ಮೆರವಣಿಗೆ ಮಾಡಲಾಯಿತು.
ನಂತರ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು
ಮುಖ್ಯ ಅತಿಥಿಗಳಾಗಿ ನಿವೃತ ಶಿಕ್ಷಕಿ ದೇವಕಿ. ಶಾಲಾ ಅಭಿವೃದ್ಧಿ ಸಮಿತಿಯ ಸಮಿತಿ ಉಪಾಧ್ಯಕ್ಷೆ ಉಷಾಲಕ್ಷಿ, ತಾಯಂದಿರ ಸಮಿತಿಯ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಪ್ರಿಯ ಉಪಸ್ಥಿತರಿದ್ದರು
ನರಿಕೊಂಬು ಗ್ರಾಮ ಪಂಚಾಯತ್, ನರಿಕೊಂಬು ಗ್ರಾಮದ ವೀರಮಾರುತಿ ವ್ಯಾಯಾಮ ಶಾಲೆ, ನರಿಕೊಂಬು ಯುವಕ ಮಂಡಲ, ವಿಜಯಲಕ್ಷ್ಮಿ ಯುವಕ ಮಂಡಲ, ವಿಲಾಸ್ ಐಸ್ ಕ್ರೀಮ್, ನರಿಕೊಂಬು ಶ್ರೀ ಶಕ್ತಿ ಒಕ್ಕೂಟ, ಕ್ಷಮಾ ಪ್ರಿಂಟರ್ಸ್, ಶೆಲ್ ಕಂಪನಿ, ಶಾಲಾ ವಿದ್ಯಾರ್ಥಿ ಹಿತೇಶ್ ಮೊದಲಾದವರು ಸಿಹಿ ತಿಂಡಿ ಹಾಗೂ ಐಸ್ ಕ್ರೀಮ್ ಒದಗಿಸಿದ್ದರು.
ಶಾಲಾ ಪ್ರಭಾರ ಮುಖ್ಯೋಪಾಧ್ಯಾಯನಿ ಸುಜಾತ ಸ್ವಾಗತಿಸಿ , ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು.