ಉಪ್ಪಳ : ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ”ಕಲಾಕುಂಚ” ಕೇರಳ ಗಡಿನಾಡ ಶಾಖೆ ಹಾಗೂ ಏಕಾಹ ಭಜನಾ ಮಂದಿರ ಮಂಗಲ್ಪಾಡಿ ಇದರ ಸಹಯೋಗದಲ್ಲಿ ರಾಮಾಯಣ ಮಾಸಾಚರಣೆ ಹಾಗೂ ಗಮಕ ಕಾರ್ಯಕ್ರಮದ ವಾರ್ಷಿಕೋತ್ಸವ ಜರಗಿತು . ಈ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಗೆ ರಾಮಾಯಣ ದ ಕುರಿತಾಗಿ “ ರಸಪ್ರಶ್ನೆ” ಕಾರ್ಯಕ್ರಮ ಜರಗಿತು.ವಿವಿಧ ಶಾಲೆಗಳ ಹಲವು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಧರ್ಮತ್ತಡ್ಕ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಅತ್ಮಿಕಾ ಜಿ.ಯು( ಒಂಭತ್ತನೇ ತರಗತಿ ಹಾಗೂ ಪ್ರತೀಕ್ಷಾ .ಬಿ.( ಹತ್ತನೇ ತರಗತಿ) ಹಾಗೂ
ದ್ವಿತೀಯ ಬಹುಮಾನ ಕೊಂಡೆವೂರು ಶ್ರೀ ನಿತ್ಯಾನಂದ ಪ್ರೌಢಶಾಲೆಯ ಮಿಥಿಲ್.ವಿ.ರೈ ಹಾಗೂ ಭರತ್ ಕೃಷ್ಣ.ಬಿ. ನಗದು ಹಣ ಮತ್ತು ಪ್ರಮಾಣ ಪತ್ರಪಡೆದುಕೊಂಡರು.ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಮಾಣಪತ್ರ ನೀಡಲಾಯಿತು. ರಾಮಾಯಣ ಮಾಸಾಚರಣೆ ಹಾಗೂ ಗಮಕ ಕಾರ್ಯಕ್ರಮದ ಉದ್ಘಾಟನೆ ಯನ್ನು
ದೇವಾಂಶು ಕಾರಂತ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಮಂದಿರದ ಅಧ್ಯಕ್ಷ ಡಾ.ಶ್ರೀಧರ ಭಟ್ ನೆರವೇರಿಸಿದರು. ಜಯಲಕ್ಷ್ಮಿ ಕಾರಂತ ಅತಿಥಿಗಳನ್ನು ಸ್ವಾಗತಿಸಿದರು..ಮುಖ್ಯ ಅತಿಥಿ ಯಾಗಿ ಮಾತೃ ಶಕ್ತಿ ಕಣ್ಣೂರು ವಿಭಾಗ ಪ್ರಮುಖ್ ಮೀರಾ ಆಳ್ವ ಉಪಸ್ಥಿತರಿದ್ದರು. ಕಲಾಕುಂಚ ಕೇರಳ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ ಅಧ್ಯಕ್ಷ ತೆ ವಹಿಸಿದ್ದರು..
ಚಂದನ ಕಾರಂತ ಧನ್ಯವಾದ ನೀಡಿದರು. ಜಯಲಕ್ಷ್ಮಿ .ಆರ್.ಹೊಳ್ಳ ಕಾ ರ್ಯಕ್ರಮ ನಿರೂಪಿಸಿದರು ತಾರಾ ಪ್ರವೀಣ್ ಸಹಕರಿಸಿದರು ಬಳಿಕ ನಡೆದ ರಾಮಾಯಣ ಸುಂದರ ಕಾಂಡದ ಗಮಕ ವಾಚನವನ್ನು ದಿವ್ಯಾ ಕಾರಂತ್ ವಾಚನಮಾಡಿದರು.ಜಯಲಕ್ಷ್ಮಿ ಕಾರಂತ್ ವ್ಯಾಖ್ಯಾನ ಮಾಡಿದರು.