ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಪೊಳಲಿ ವಲಯದ ಬೆಂಜನಪದವು ಬ್ರಹ್ಮರಕೊಟ್ಲು ಮೇರೇ ಮಜಲು, ಕೊಡಮನ್ ಕಾರ್ಯಕ್ಷೇತ್ರದ ಶ್ರೀ ದುರ್ಗಾ, ಸೌಭಾಗ್ಯ, ವ್ಯಾಘ್ರಶ್ವರಿ, ಅಮ್ಮ ಜ್ಞಾನವಿಕಾಸ ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಬೆಂಜನಪದವುನಲ್ಲಿ ಜರಗಿತು.
ಅಖಿಲ ಕರ್ನಾಟಕ ಜನಜಗೃತಿ ವೇದಿಕೆ ಬಂಟ್ವಳ ತಾಲೂಕಿನ ಅಧ್ಯಕ್ಷ ರೋನಾಲ್ಡ್ ಡಿ ಸೋಜ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರಿಗೆ ಜ್ಞಾನ ವಿಕಾಸ ಕೇಂದ್ರ ಪ್ರತಿಭೆ ಯನ್ನು ವ್ಯೆಕ್ತ ಪಡಿಸಲು ಉತ್ತಮ ವೇದಿಕೆ ವಾಗಿದೆ. ಮಹಿಳೆಯರ ಸಮಸ್ಯೆಯನ್ನು ಅರಿತು ಕೊಂಡು ಮಾತೃಶ್ರೀ ಹೇಮಾವತಿ ಹೆಗ್ಡೆ ಯವರು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ಜ್ಞಾನವಿಕಾಸ ಕೇಂದ್ರ ಪ್ರಾರಂಭ ಮಾಡಿದ್ದಾರೆ ಇದರ ಸದುಉಪಯೋಗ ಪಡೆದು ಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾರ್ಧನ ಬಾರಿಂಜೆ ವಹಿಸಿದ್ದರು
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಂಟ್ವಾಳ ಎಸ್ ವಿ ಎಸ್ ಶಾಲಾ ಶಿಕ್ಷಕಿ ಪೂರ್ಣಿಮ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮಹಿಳೆ ವಿದ್ಯಾವಂತಲಾದರೆ ಒಂದು ಕುಟುಂಬದ ಚಿತ್ರಣವೇ ಬದಲಾಗುತ್ತದೆ. ಮಕ್ಕಳು ಹೆಚ್ಚಾಗಿ ಅಮ್ಮಂದಿರರ ಒಡನಾಟಿನಲ್ಲಿ ಇರುವುದರಿಂದ ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ ಎಂದರು
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ರವರು
ಕಷ್ಟದ ಜೀವನವನ್ನು ನಮ್ಮ ಮಕ್ಕಳಿಗೂ ತಿಳಿಸ ಬೇಕು. ಆಚಾರ ವಿಚಾರ ದಾ ಬಗ್ಗೆ ಮಕ್ಕಳಿಗೂ ತಿಳಿಸಬೇಕು ಎಂದರು
ವಲಯದ ಅಧ್ಯಕ್ಷರು ಜನಾರ್ಧನ ಪುಂಚಮೇ, ಉದ್ಯಾಮಿ ಉಮೇಶ್ ಸಾಲ್ಯಾನ್,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವಾಮನಾ ಆಚಾರ್ಯ, ಬ್ರಮ್ಮರ ಕೊಟ್ಲು ಒಕ್ಕೂಟ ದ ಕಾರ್ಯದರ್ಶಿ ಡೇವಿಡ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮಾಡಲಿ ಸೇವಾಪ್ರತಿನಿಧಿ ಭವ್ಯ, ಶೋಭ ಶೈಲಜಾ, ಒಕ್ಕೂಟ ಅಧ್ಯಕ್ಷರು,ಪದಾಧಿಕಾರಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಪೊಳಲಿ ವಲಯದ ಮೇಲ್ವಿಚಾರಕಿ ಹರಿನಾಕ್ಷಿ ಸ್ವಾಗತಿಸಿ,
ಸೇವಾಪ್ರತಿನಿಧಿ ರತ್ನವಂದಿಸಿ, ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.