ಇಂದು ಜಗದೋದ್ಧಾರಕ ಶ್ರೀ ಕೃಷ್ಣ ಜನ್ಮಾಷ್ಟಮಿ.. ಕೃಷ್ಣನ ಸ್ಮರಿಸಿದರೆ..ಕಷ್ಟವೆಲ್ಲಾ ಮಾಯಾ..

Share with

ಇಂದು ಜಗದೋದ್ಧಾರಕ ಶ್ರೀ ಕೃಷ್ಣ ಪರಮಾತ್ಮನ ಜನ್ಮಾಷ್ಟಮಿ. ಕೃಷ್ಣನ ಜನ್ಮಾಷ್ಟಮಿ ಹಬ್ಬವನ್ನು ಬಹಳ ವಿಶೇಷತೆಯಿಂದ ಆಚರಿಸಲಾಗುತ್ತದೆ. ಭಾರತದಾದ್ಯಂತ ವಿಭಿನ್ನವಾಗಿ ಇದನ್ನು ಆಚರಿಸುವ ಪದ್ಧತಿ ಇದೆ. ಪುರಾಣಗಳ ಪ್ರಕಾರ, ದ್ವಾಪರಯುಗದಲ್ಲಿ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನು ಜನಿಸಿದರು. ಆ ಸಮಯದಲ್ಲಿ ವೃಷಭ ರಾಶಿಯಲ್ಲಿ ಚಂದ್ರನಿದ್ದನು. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಭಾದ್ರಪದ ಕೃಷ್ಣ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಈ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ.

ವೈದಿಕ ಪಂಚಾಂಗದ ಆಧಾರದ ಮೇಲೆ ಈ ವರ್ಷ ಭಾದ್ರಪದ ಕೃಷ್ಣ ಅಷ್ಟಮಿ ತಿಥಿ ಆ26 ರಂದು ಮುಂಜಾನೆ 3.39 ಕ್ಕೆ ಆರಂಭವಾಗಿ, ಆಗಸ್ಟ್ 27 ರಂದು 2:19 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿಯ ನಂಬಿಕೆಯ ಪ್ರಕಾರ ಆಗಸ್ಟ್ 26 ಸೋಮವಾರದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಸೋಮವಾರ ಆಗಸ್ಟ್‌ 26ರ ಜನ್ಮಾಷ್ಟಮಿಯ ದಿನದ ಮುಹೂರ್ತವು 12:01 AM ರಿಂದ 12:45 AM ವರೆಗೆ ಇರುತ್ತದೆ. ಇದು ನಿಶಿತಾ ಮುಹೂರ್ತ. ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ.

ಉಪವಾಸ ಹೇಗೆ ಮಾಡುವುದು?

ಇನ್ನು ಕೃಷ್ಣ ಜನ್ಮಾಷ್ಟಮಿಯ ದಿನ ಸಾಮಾನ್ಯವಾಗಿ ಬೆಳಗ್ಗೆಯಿಂದ ಕೆಲವರು ಉಪವಾಸ ಮಾಡುತ್ತಾರೆ. ರಾತ್ರಿ ಕೃಷ್ಣನ ಪೂಜೆ ಮಾಡಿ, ವಿಶೇಷ ನೈವೇದ್ಯಗಳನ್ನು ಅರ್ಪಣೆ ಮಾಡಲಾಗುತ್ತದೆ. ಅದರ ನಂತರ ಆಹಾರ ಸೇವನೆ ಮಾಡುತ್ತಾರೆ. ಈ ಕೃಷ್ಣಾಷ್ಟಮಿಯ ದಿನ ಮುಂಜಾನೆ ಬೇಗ ಎದ್ದು ಅಭ್ಯಂಜನ ಸ್ನಾನ ಮಾಡಿ. ಬಾಗಿಲಿಗೆ ತೋರಣ, ಮುಖಮಂಟಪದಲ್ಲಿ ಕುಂಕುಮ, ರಂಗೋಲಿಯನ್ನ ಹಾಕಿ ಪೂಜೆಗೆ ಸಿದ್ಧಗೊಳಿಸಬೇಕು. ಆ ಬಾಲಕೃಷ್ಣನನ್ನು ಮನೆಗೆ ಆಹ್ವಾನಿಸಿ, ಕೃಷ್ಣನ ಪಾದಗಳನ್ನು ಹೊರಗಿನಿಂದ ಮನೆಯೊಳಗೆ ಬರುವಂತೆ ಬರೆಯಬೇಕು. ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಗೆ ಕೃಷ್ಣಾಷ್ಟಮಿ ಪೂಜೆಯನ್ನು ಪ್ರಾರಂಭಿಸುವುದು ವಾಡಿಕೆ. ಆದರೆ ರಾತ್ರಿ 12 ಗಂಟೆಗೆ ಪೂಜೆ ಮಾಡುವುದು ಬಹಳ ವಿಶೇಷ ಎನ್ನಲಾಗುತ್ತದೆ. ಕೃಷ್ಣನಿಗೆ ತುಳಸಿ ಎಂದರೆ ತುಂಬಾ ಇಷ್ಟ. ಆದ್ದರಿಂದ ಪೂಜೆಗೆ ಬಳಸುವ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿದರೆ ಒಳ್ಳೆಯ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ.


ಜನ್ಮಾಷ್ಟಮಿಯಂದು ಅನ್ನದ ಹಾಗೆಯೇ, ಬೆಳ್ಳುಳ್ಳಿ, ಈರುಳ್ಳಿ ಬಳಕೆ ಮಾಡಿ ಆಹಾರ ತಯಾರಿಸಬಾರದು. ಅದನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಇದರ ಜೊತೆಗೆ ಮಾಂಸ ಮತ್ತು ಮದ್ಯವನ್ನು ಸಹ ಮುಟ್ಟಬಾರದು. ಈ ದಿನ ಕೃಷ್ಣನಿಗೆ ಪೂಜೆ ಮಾಡುವಾಗ ಸಹ ತುಳಸಿ ಹಾರವನ್ನು ಹಾಕಬೇಕು. ಇದರಿಂದ ಕೃಷ್ಟನ ಕೃಪೆಗೆ ಸುಲಭವಾಗಿ ಪಾತ್ರರಾಗಬಹುದು.


ಜನ್ಮಾಷ್ಟಮಿಯನ್ನು ಭಾರತದಲ್ಲಿ ವಿವಿಧ ರೀತಿಯ ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ. ವಿಶೇಷವಾಗಿ ಕೃಷ್ಣನ ಜನ್ಮಸ್ಥಳಗಳಾದ ಮಥುರಾ ಮತ್ತು ವೃಂದಾವನದಲ್ಲಿ ಆಚರಣೆಗಳು ಬಹಳ ವಿಶೇಷವಾಗಿರುತ್ತದೆ. ದೇವಾಲಯಗಳನ್ನು ಅಲಂಕರಿಸಲಾಗುತ್ತದೆ. ಹೂವುಗಳು ಮತ್ತು ಬಣ್ಣದ ದೀಪಗಳಿಂದ ಸಿಂಗಾರ ಮಾಡಲಾಗುತ್ತದೆ. ವಾರಗಟ್ಟಲೆ ಮೊದಲೇ ಇಲ್ಲಿ ಆಚರಣೆ ಶುರು ಮಾಡಲಾಗುತ್ತದೆ.ಈ ಹಬ್ಬದ ದಿನ ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಅನ್ನವನ್ನ ಮಾತ್ರ ಸೇವನೆ ಮಾಡಬಾರದು ಎನ್ನಲಾಗುತ್ತದೆ. ಏಕಾದಶಿಯಂದು ಅಕ್ಕಿ ಅಥವಾ ಬಾರ್ಲಿಯಿಂದ ಮಾಡಿದ ಆಹಾರವನ್ನ ಸೇವನೆ ಮಾಡಬಾರದು.


Share with

Leave a Reply

Your email address will not be published. Required fields are marked *