ಅಯೋಧ್ಯೆಗೆ ತೆರಳಿದ್ದ ವ್ಯಕ್ತಿಯನ್ನು ರೈಲಿನಲ್ಲಿ ದೋಚಿದರು!

Share with

ಪುತ್ತೂರು: ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದ ವೇಳೆ ತಂಡದಿಂದ ಬೇರ್ಪಟ್ಟಿದ್ದ ಪುತ್ತೂರಿನ ಹಿರಿಯ ವ್ಯಕ್ತಿಯೋರ್ವರನ್ನು ರೈಲಿನಲ್ಲಿ ಅಪರಿಚಿತರ ತಂಡ ದೋಚಿದ ಘಟನೆ ನಡೆದಿದೆ.

ಬೆಟ್ಟಂಪಾಡಿ ಬಳಿಯ ಕಕ್ಕೂರು ನಿವಾಸಿ ಸುಬ್ರಹ್ಮಣ್ಯ ಭಟ್‌ (64) ಅವರ ಲ್ಲಿದ್ದ ಹಣ ಹಾಗೂ ಇತರ ವಸ್ತುಗಳನ್ನು ಅಪರಿಚಿತರು ದಿಲ್ಲಿಯಿಂದ ಅಯೋಧ್ಯೆಗೆ ತೆರಳುತ್ತಿದ್ದ ರೈಲಿನಲ್ಲಿ ದೋಚಿದ್ದು, ಈಗ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ. ಇವರು ವಾರಾಣಸಿ, ಪ್ರಯಾಗ ಮತ್ತು ಗಯಾ ಕ್ಷೇತ್ರಗಳಿಗೆ 30 ಯಾ ತ್ರಿಗಳ ತಂಡದೊಂದಿಗೆ ತೆರಳಿದ್ದರು.

ರಿಕ್ಷಾದಿಂದ ಇಳಿಯುವಾಗ ಬಾಕಿ
ಸುಬ್ರಹ್ಮಣ್ಯ ಭಟ್‌ ಮತ್ತು ಅವರ ಪತ್ನಿ ವೀಣಾ ಸೇರಿದಂತೆ ಜು. 29ರಂದು ಯಾತ್ರಿಗಳ ತಂಡವು ದಿಲ್ಲಿಗೆ ಹೊರಟು, ಜು.31ರಂದು ದಿಲ್ಲಿಯ ನಿಜಾಮುದ್ದೀನ್‌ ರೈಲು ನಿಲ್ದಾಣದಲ್ಲಿ ಇಳಿದಿತ್ತು. ಅಲ್ಲಿ ಊಟ ಮಾಡಲು ಹೊಟೇಲಿಗೆ ತೆರಳಿ, ಬಳಿಕ ರಿಕ್ಷಾದ ಮೂಲಕ ರೈಲು ನಿಲ್ದಾಣಕ್ಕೆ ವಾಪಸು ಬರಬೇಕಿತ್ತು. ಅದರಂತೆ ಊಟ ಮುಗಿಸಿ ಐದಾರು ಆಟೋದಲ್ಲಿ 30 ಜನರು ಹೊರಟರು.
ಸುಬ್ರಹ್ಮಣ್ಯ ಭಟ್‌ ಮತ್ತು ಅವರ ಪತ್ನಿ ಇದ್ದ ರಿಕ್ಷಾದಲ್ಲಿ ಮತ್ತೂ ಮೂವರಿದ್ದರು. ವೀಣಾ ಸಹಿತ ಇತರ ಮೂವರು ರಿಕ್ಷಾದಿಂದ ಇಳಿದು ನಿಲ್ದಾಣಕ್ಕೆ ಹೊರಟರು. ಸುಬ್ರಹ್ಮಣ್ಯ ಭಟ್‌ ಕೊನೆಯವರಾಗಿ ಇಳಿದರು. ಆದರೆ ರಿಕ್ಷಾ ಚಾಲಕ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ. ಚಾಲಕನ ಹತ್ತಿರವಿದ್ದ ಸ್ಥಳೀಯರ ಗುಂಪೊಂದು ಒತ್ತಾಯಿಸಿದಾಗ 300 ರೂ. ನೀಡಿ ಬರುಷ್ಟರಲ್ಲಿ ರೈಲು ಹೊರಟಿತ್ತು.


Share with

Leave a Reply

Your email address will not be published. Required fields are marked *