ಅಕ್ಷಯ ಕಾಲೇಜಿನಲ್ಲಿ  ರಾಷ್ಟ್ರೀಯ ಕ್ರೀಡಾ ದಿನಾಚರಣೆ

Share with


ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು   ಆಚರಿಸಲಾಯಿತು.   
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ  ನವೀನ್ ಕುಮಾರ್  ರೈ. ಕೆ ದೈಹಿಕ  ಶಿಕ್ಷಣ ಶಿಕ್ಷಕರು  ಕೆ. ಪಿ.ಎಸ್ ಕೆಯ್ಯೂರ್ ಅವರು ಮಾತನಾಡಿ “ಹಾಕಿ ಕ್ರೀಡೆ” ದಂತಕಥೆ ಮೇಜರ್ ಧ್ಯಾನ್ ಚಂದ್  ಅವರ  ಜನ್ಮ ದಿನವನ್ನು  ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಗಸ್ಟ್ 29 ನ್ನು ಆಚರಿಸಲಾಗುತ್ತದೆ . ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ  ಒಲಿಂಪಿಕ್ಸ್  ನಲ್ಲಿ  ಭಾರತೀಯ   “ಹಾಕಿ  ಕ್ರೀಡೆ” ಮಾಂತ್ರಿಕ  ಧ್ಯಾನ್ ಚಂದ್  ರವರ  ಅಪ್ರತಿಮ  ಸಾಧನೆಯನ್ನು ಕೊಂಡಾಡಿದರು. ವ್ಯಕ್ತಿಯ  ದೈಹಿಕ ಮತ್ತು  ಮಾನಸಿಕ  ಬೆಳವಣಿಗೆಯಲ್ಲಿ  ಕ್ರೀಡೆಯು  ವಹಿಸುವ ಮಹತ್ತರ  ಪಾತ್ರ ದ  ಬಗ್ಗೆ  ಜಾಗೃತಿ ಮೂಡಿಸಲು  ಈ ದಿನವನ್ನು ಆಚರಿಸಲಾಗುತ್ತದೆ .ಕ್ರೀಡೆಯು  ವಿದ್ಯಾರ್ಥಿಗಳು  ಮಾನಸಿಕ ಒತ್ತಡ ವನ್ನು  ಕಡಿಮೆ ಮಾಡಿ ಉತ್ಸಾಹ  ಮೂಡಿಸುತ್ತದೆ.  ಆಟ  , ಪಾಠ ಗಳ  ಜೊತೆಗೆ ಧ್ಯಾನ ಮಾಡುವುದರಿಂದ  ಏಕಾಗ್ರತೆ, ಸಹನೆ  ಮತ್ತು ಸದಾ    ಚಟುವಟಿಕೆಯಿಂದಿರಲು   ಸಾಧ್ಯವಾಗುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. 
  ಕಾಲೇಜಿನ ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ  ಅವರು  ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾವು  ನಮ್ಮ  ದೇಶದ ಅಪ್ರತಿಮ  ಕ್ರೀಡಾ ಪಟುವಿನ ಜನ್ಮದಿನ ವನ್ನು   ದೇಶದ ಕ್ರೀಡಾ ದಿನವನ್ನಾಗಿ  ಆಚರಿಸುವುದು  ಪ್ರತಿಯೊಬ್ಬ ಕ್ರೀಡಾ ಪಟುವಿಗೆ  ಅಭಿಮಾನದ  ವಿಷಯ .  ವಿದ್ಯಾರ್ಥಿಗಳು  ವಿವಿಧ ಕ್ರೀಡೆಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡಿರ ಬೇಕು.  ಸ್ಪರ್ಧಾತ್ಮಕ  ಯುಗದಲ್ಲಿ  ತಮ್ಮ  ಅರ್ಹತೆಯನ್ನು   ದ್ವಿಗುಣಗೊಳಿಸಲು ಪಠ್ಯೇತರ ಚಟುವಟಿಕೆಗಳಲ್ಲಿ  ತಮ್ಮ  ಸಾಧನೆಯು ಅತೀ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 
ಕಾಲೇಜಿನ ಆಡಳಿತಾಧಿಕಾರಿ ಯಾದ   ಶ್ರೀ ಅರ್ಪಿತ್  ಟಿ ಎ , ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ  ಜೀವನ್, ಕ್ರೀಡಾ ಕಾರ್ಯದರ್ಶಿ   ಕುಮಾರಿ ವಿಸ್ಮಿತ  ಅಂತಿಮ  ಪದವಿ ವಾಣಿಜ್ಯವಿಭಾಗ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಕುಮಾರಿ ಮೋಕ್ಷ ಪ್ರಥಮ ಫ್ಯಾಷನ್ ಡಿಸೈನ್ ವಿಭಾಗ ಪ್ರಾರ್ಥನೆ ಹಾಡಿದರು  ಮತ್ತು ಕಾಲೇಜಿನ ದೈಹಿಕ  ಶಿಕ್ಷಣ ನಿರ್ದೇಶಕರು  ಶ್ರೀಯುತ  ನವೀನ್ ಸ್ವಾಗತಿಸಿ,  ಬಿ ಎಚ್. ಎಸ್  ವಿಭಾಗದ ಉಪನ್ಯಾಸಕಿ ಶ್ರುತ ವಂದಿಸಿ,  ಫ್ಯಾಷನ್ ಡಿಸೈನ್ ವಿಭಾಗದ  ಉಪನ್ಯಾಸಕಿ ಧನ್ಯ ಶ್ರೀ   ಕಾರ್ಯಕ್ರಮವನ್ನು  ನಿರೂಪಿಸಿದರು.


Share with

Leave a Reply

Your email address will not be published. Required fields are marked *