3300 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಶ್ರೀಮಂತ ಶ್ವಾನವಿದು

Share with

ಸಾವಿರಾರು ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ಶ್ವಾನವಿದು. ಇತ್ತೀಚಿಗಷ್ಟೇ ಈ ಶ್ವಾನ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. ಈ ಶ್ವಾನ ಸ್ವಂತ ವಿಮಾನ ಸೇರಿದಂತೆ BMW ಕಾರನ್ನು ಹೊಂದಿದೆ. ಇದಲ್ಲದೆ, ಈ ನಾಯಿಯ ಸೇವೆಗಾಗಿ 27 ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ.

ಜರ್ಮನ್ ಶೆಫರ್ಡ್ ತಳಿಯ ಈ ಶ್ವಾನದ ಹೆಸರು ಗುಂಥರ್-6. ಈ ಶ್ವಾನದ ಹೆಸರಿನಲ್ಲಿ ಒಟ್ಟು 3,300 ಕೋಟಿ ರೂಪಾಯಿ ಆಸ್ತಿಯಿದೆ. ಈ ಶ್ವಾನವನ್ನು ನೋಡಿಕೊಳ್ಳಲು 27 ಕೆಲಸಗಾರರಿದ್ದಾರೆ. ಇದಲ್ಲದೇ ರುಚಿಕರವಾದ ಖಾದ್ಯವನ್ನು ತಯಾರಿಸಲು ವಿಶೇಷ ಬಾಣಸಿಗರನ್ನೂ ಕೂಡ ನೇಮಿಸಲಾಗಿದೆ.

1992 ರಲ್ಲಿ ಕಾರ್ಲೋಟಾ ಲೀಬೆನ್‌ಸ್ಟೈನ್ ಎಂಬ ಶ್ರೀಮಂತ ಮಹಿಳೆ ತನ್ನ ಸಾವಿಗೂ ಮುನ್ನ ತನ್ನ ಎಲ್ಲಾ ಆಸ್ತಿಯನ್ನು ತನ್ನ ಮುದ್ದಿನ ಜರ್ಮನ್ ಶೆಫರ್ಡ್ ತಳಿಯ ಶ್ವಾನದ ಹೆಸರಿಗೆ ಬರೆದಿದ್ದಳು. ಇದಲ್ಲದೇ ತನ್ನ ಶ್ವಾನದ ಮುಂದಿನ ಸಂತತಿಗೆ ಈ ಆಸ್ತಿ ಮುಂದುವರಿಯುತ್ತಾ ಹೋಗಬೇಕು ಎಂದು ಶರತ್ತು ವಿಧಿಸಿದ್ದಳು. ಅಂದರಂತೆ ಇದೀಗ ಶ್ವಾನ ಗುಂಥರ್-6 ಹೆಸರಿನಲ್ಲಿ ಎಲ್ಲಾ ಆಸ್ತಿಗಳಿವೆ. ಮೌರಿಜಿಯೊ ಮಿಯಾನ್‌ ಎಂಬಾತ ಈ ಎಲ್ಲ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾನೆ.


Share with

Leave a Reply

Your email address will not be published. Required fields are marked *