ಶ್ರೀಮಂತ ಮಂದಿ ಹಣದ ಮದದಲ್ಲಿ ಇತರರನ್ನು ಕೀಳಾಗಿ ನೋಡುತ್ತಾ ಅಹಂಕಾರದಿಂದ ಮೆರೆದಾಡುತ್ತಿರುತ್ತಾರೆ.
ಹಿಂದಿನಿಂದ ಬಂದ ತಮ್ಮ ಕಾರಿಗೆ ಮುಂದೆ ನಿಂತಿದ್ದ ಫುಡ್ ಡೆಲಿವರಿ ಹುಡುಗನ ಬೈಕ್ ಟಚ್ ಆಯಿತೆಂದು, ಕಾರಿನಿಂದ ಇಳಿದ ತಂದೆ ಮಗ ಫುಡ್ ಡೆಲಿವರಿ ಬ್ಯಾಗ್ ಅನ್ನು ರಸ್ತೆಗೆಸೆದು, ಯುವಕನ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ‘ಹೀಗೆ ದರ್ಪ ತೋರಿಸುವವರ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಬೇಕು’ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ