ಒತ್ತಡದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅಲ್ಲದೆ ಇದರಿಂದ ಮೈಗ್ರೇನ್ ನಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರೀತಿಯ ಒತ್ತಡದಲ್ಲಿ ನಮಗೆ ಕೋಪ ಬೇಗ ಬರುತ್ತದೆ. ಹಾಗಾಗಿ ಇದನ್ನು ತಡೆಯಲು ನಾವು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ನಿಮಗೂ ಪದೇ ಪದೇ ತಲೆನೋವು ಕಂಡು ಬರುತ್ತಿದ್ದು, ಕೋಪ ತಕ್ಷಣ ಬರುತ್ತಿದ್ದರೆ ಇದಕ್ಕೆ ಮಾತ್ರೆ ತಿನ್ನುವ ಬದಲು ಪೌಷ್ಟಿಕತಜ್ಞೆ ಪೂಜಾ ಗಣೇಶ್ ಅವರು ತಿಳಿಸಿರುವ ಈ ಸುಲಭ ಮತ್ತು ಸರಳ ಮಾಹಿತಿಗಳನ್ನು ಪಾಲನೆ ಮಾಡಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಒತ್ತಡದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅಲ್ಲದೆ ಇದರಿಂದ ಮೈಗ್ರೇನ್ ನಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರೀತಿಯ ಒತ್ತಡದಲ್ಲಿ ನಮಗೆ ಕೋಪ ಬೇಗ ಬರುತ್ತದೆ. ಹಾಗಾಗಿ ಇದನ್ನು ತಡೆಯಲು ನಾವು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ನಿಮಗೂ ಪದೇ ಪದೇ ತಲೆನೋವು ಕಂಡು ಬರುತ್ತಿದ್ದು, ಕೋಪ ತಕ್ಷಣ ಬರುತ್ತಿದ್ದರೆ ಇದಕ್ಕೆ ಮಾತ್ರೆ ತಿನ್ನುವ ಬದಲು ಪೌಷ್ಟಿಕತಜ್ಞೆ ಪೂಜಾ ಗಣೇಶ್ ಅವರು ತಿಳಿಸಿರುವ ಈ ಸುಲಭ ಮತ್ತು ಸರಳ ಮಾಹಿತಿಗಳನ್ನು ಪಾಲನೆ ಮಾಡಬಹುದಾಗಿದೆ.
ಪೂಜಾ ಗಣೇಶ್ ಅವರು ಮೈಗ್ರೇನ್, ತಲೆನೋವು, ಕೋಪದ ಸಮಸ್ಯೆಗಳಿಗೆ ನಿಜವಾದ ಕಾರಣಗಳು ಮತ್ತು ಅವುಗಳಿಗೆ ಯಾವ ರೀತಿಯ ಪರಿಹಾರಗಳಿವೆ ಎಂಬುದನ್ನು ತಿಳಿಸಿದ್ದು ಇದನ್ನು ನಿಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ತಪ್ಪದೆ ಅಳವಡಿಸಿಕೊಳ್ಳಬೇಕಾಗಿದೆ. ಇದರಿಂದ ನಿಮಗೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಮೈಗ್ರೇನ್ ಸಮಸ್ಯೆಗೆ ಕಾರಣಗಳೇನು?
- ಜೆನಿಟಿಕ್
- ಹಾರ್ಮೋನ್ ಏರಿಳಿತ
- ಅತಿಯಾದ ಒತ್ತಡ ಅಥವಾ ಚಿಂತೆ
- ನಿದ್ದೆ ಸರಿಯಾಗಿ ಮಾಡದೆ ಇರುವುದು
- ವಾತಾವರಣದಲ್ಲಿ ಬದಲಾವಣೆ
- ಹೊರಗಿನ ತಂಪು ಪಾನೀಯ ಸೇವನೆ ಮಾಡುವುದು
- ಬಲ್ಪ್, ಲೈಟ್ ಗಳಿಂದ ಟ್ರಿಗರ್ ಆಗುವುದು
- ಕೂಗಾಟ ಅಥವಾ ಕಿರುಚಾಟ
ಮೈಗ್ರೇನ್ ಸಮಸ್ಯೆಗೆ ಪರಿಹಾರವೇನು?
- ಆದಷ್ಟು ನಿದ್ದೆಯನ್ನು ಸರಿಯಾಗಿ ಮಾಡಿ
- 30 ನಿಮಿಷ ವ್ಯಾಯಾಮ ಮಾಡಿ
- ಪ್ರತಿ ದಿನ ಒಂದು ಚಮಚ ಅಗಸೆ ಬೀಜ ಸೇವಿಸಿ
ಸೌತೆಕಾಯಿ, ಹಸಿರು ಸೊಪ್ಪನ್ನು ಪ್ರತಿನಿತ್ಯ ಒಂದು ಕಪ್ ನಷ್ಟು ಸೇವಿಸಿ - ವಾರದಲ್ಲಿ ಮೂರು ಬಾರಿ ಬಾಳೆಹಣ್ಣು ಸೇವಿಸಿ (ಮಧುಮೇಹಿಗಳು ಇದನ್ನು ತ್ಯಜಿಸಿ)
- ಅತಿಯಾದ ಕಾಫಿ, ಟೀ, ಹೊರ ಪ್ಯಾಕೆಟ್ ಆಹಾರವನ್ನು ತ್ಯಜಿಸಿ
- ಚೀಸ್ ಸೇವಿಸಬೇಡಿ
- ಬೆಳಗ್ಗಿನ ಹತ್ತು ನಿಮಿಷ ಸೂರ್ಯನ ಬಿಸಿಲನ್ನು ಪಡೆಯಿರಿ
- ಸಂಜೆ ಶುಂಠಿ ನೀರನ್ನು ಸೇವಿಸಿ
- ಹತ್ತು ನಿಮಿಷ ಧ್ಯಾನ ಮಾಡಿ
- ಆಹಾರದಲ್ಲಿ ಅತಿಯಾದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಕಡಿಮೆ ಮಾಡಿ