ರೈಲು ಅಥವಾ ಬಸ್ ಹಿಡಿಯಲು ಪ್ರಯಾಣಿಕರ ನಡುವೆ ಯಾವಾಗಲೂ ಜಗಳ ನಡೆಯುತ್ತಿರುತ್ತದೆ. ಅದರಲ್ಲಿ ಸರ್ಕಾರದ ಶಕ್ತಿಯೋಜನೆಗಳ ಬಂದ ಮೇಲಂತೂ ಬಸ್ಸಿನಲ್ಲಿ ಸೀಟಿಗಾಗಿ ಜಡೆಜಗಳಗಳು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಯಾವತ್ತಾದರೂ ರೈಲನ್ನು ಓಡಿಸಲು ಪೈಲೆಟ್ಸ್ ಗಳು ಜಗಳವಾಡುವುದನ್ನು ಕೇಳಿದ್ದೀರಾ. ಹೌದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಓಡಿಸಲು ರೈಲ್ವೇಯ ಲೋಕೋ ಪೈಲೆಟ್ಸ್ ಗಳ ನಡುವೆ ನಡೆದ ಜಗಳವೊಂದು ನಡೆದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ರಾಜೇಂದ್ರ ಬಿ. ಅಕ್ಲೇಕರ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ‘ಪ್ರತಿಷ್ಠಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಓಡಿಸಲು ಲೋಕೋ ಪೈಲೆಟ್ಸ್ ಗಳ ನಡುವಿನ ಜಗಳವು ಭಾರತೀಯ ರೈಲ್ವೆಗೆ ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಐಷಾರಾಮಿ ವಂದೇಭಾರತ್ ಎಕ್ಸ್‌ಪ್ರೆಸ್‌ನ ಚಾಲಕನ ಕ್ಯಾಬಿನ್‌ಗೆ ಹೋಗಲು ಲೋಕೋ ಪೈಲೆಟ್ಸ್ ಹರಸಾಹಸ ಪಡುತ್ತಿರುವುದನ್ನು ಕಾಣಬಹುದು. ಮೊದಲಿಗೆ ಲೋಕೋ ಪೈಲೆಟ್ಸ್ ಒಬ್ಬರು ಆಗ್ರಾ-ಉದಯಪುರ ರೈಲಿನ ಪೈಲೆಟ್ಸ್ ಕಂಪಾರ್ಟ್‌ಮೆಂಟ್ ಹತ್ತಿ ಬಾಗಿಲು ಲಾಕ್ ಮಾಡಿದ್ದಾರೆ.
ಇತ್ತ ಈ ರೈಲು ನಾನು ಓಡಿಸುವುದು ಎಂದು ಕೆಲ ಲೋಕೋ ಪೈಲೆಟ್ಸ್ ಗಳು ಜಗಳ ಆರಂಭಿಸಿದ್ದಾರೆ. ಆದರೆ ಬಾಗಿಲು ತೆಗೆಯದ ಕಾರಣ ಈ ರೈಲಿನ ಕಿಟಿಕಿಯಿಂದ ಒಬ್ಬೊಬ್ಬರು ಲೊಕೋಪೈಲೆಟ್ಸ್ ನುಸುಳಿಕೊಂಡು ರೈಲು ಹತ್ತುವುದನ್ನು ಕಾಣಬಹುದು. ಈ ವಂದೇಭಾರತ ರೈಲನ್ನು ಓಡಿಸಲು ಪರಸ್ಪರ ಬಟ್ಟೆ ಹರಿದುಕೊಳ್ಳುವಷ್ಟರ ಮಟ್ಟಿಗೆ ಜಗಳ ಆಡಿದ್ದಾರೆ.