ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಕೇಂದ್ರ ಶುಭ ಸುದ್ದಿ ನೀಡಿದೆ. ಉಚಿತವಾಗಿ ಅಪ್ ಡೇಟ್ ಮಾಡುವ ಅವಕಾಶ ಇದೇ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳುತ್ತಿದ್ದಂತೆ ಅಧಿಸೂಚನೆಯನ್ನು ವಿಸ್ತರಿಸಲಾಗಿದೆ.
ಹೊಸ ಪ್ರಕಟಣೆಯಂತೆ, ಆಧಾರ್ ಅನ್ನು ಡಿಸೆಂಬರ್ 14 ರವರೆಗೆ ಉಚಿತವಾಗಿ ನವೀಕರಿಸಬಹುದು. ಗಡುವಿನ ನಂತರ ರೂ.50 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಆಧಾರ್ ಅಪ್ ಡೇಟ್ ಮಾಡದಿದ್ದರೂ ಕೆಲಸ ಮಾಡುತ್ತದೆ ಎಂದು UIDAI ಹೇಳಿದೆ.