ಸುರತ್ಕಲ್ : ಮಸೀದಿಯೊಂದಕ್ಕೆ ಕಲ್ಲು ಬಿಸಾಡಿರುವ ಘಟನೆ ಕೃಷ್ಣಾಪುರ ಕಾಟಿಪಳ್ಳ ಮೂರನೆಯ ಬ್ಲಾಕ್ ಬಳಿ ರವಿವಾರ(ಸೆ.15) ತಡರಾತ್ರಿ ನಡೆದಿದೆ.
ಕೃಷ್ಣಾಪುರ ಕಾಟಿಪಳ್ಳ ಮೂರನೆಯ ಬ್ಲಾಕ್ ಬಳಿ ಇರುವ ಮಸೀದಿಗೆ ಬೈಕ್ ನಲ್ಲಿ ಬಂದ ಕಿಡಿಗೇಡಿಗಳ ತಂಡವೊಂದು ಕಲ್ಲು ಬಿಸಾಡಿ ಸ್ಥಳದಿಂದ ಪರಾರಿಯಾಗಿರುವುದಾಗಿ ಹೇಳಲಾಗಿದೆ. ಪಣಂಬೂರು ಎಸಿಪಿ ಮನೋಜ್ ಕುಮಾರ್ ಹಾಗೂ ಸುರತ್ಕಲ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.