ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ಓಣಂ ಹಬ್ಬಾಚರಣೆ
ಪರಸ್ಪರ ಸಹೋದರತ್ವ ಭಾವನೆ ಬಿಂಬಿಸುವ ಹಬ್ಬ ಓಣಂ ಹಬ್ಬ-ಡಾ.ಪ್ರದೀಪ್ ಕುಮಾರ್

Share with




ಪುತ್ತೂರು: ಕೇರಳದಲ್ಲಿ ಓಣಂ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು ಪ್ರಸ್ತುತ ಇದು ಜಗತ್ತಿನಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಓಣಂ ಹಬ್ಬವನ್ನು ಎಲ್ಲಾ ಜಾತಿ, ಧರ್ಮದವರು ಯಾವುದೇ ಬೇಧಭಾವವಿಲ್ಲದೆ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು ಹಬ್ಬದ ಸಂಕೇತವಾಗಿರುವ ಪೂಕಳಂ ಅನ್ನು ಬಿಡಿಸಿ ಒಂಭತ್ತು ದಿನಗಳಲ್ಲೂ ಆಚರಿಸುವ ಮೂಲಕ ಸಹೋದರತ್ವ ಭಾವನೆಯನ್ನು ತೋರಿಸಿಕೊಡುತ್ತದೆ ಎಂದು ಡಾ.ಪ್ರದೀಪ್ ಕುಮಾರ್ಸ್ ಹಾಸ್ಪಿಟಾಲಿಟಿ ಆಫ್ ಆಯುರ್ವೇದ ಇದರ ನಿರ್ದೇಶಕ ಹಾಗೂ ಮುಖ್ಯ ಫಿಸಿಶಿಯನ್ ಡಾ.ಪ್ರದೀಪ್ ಕುಮಾರ್‌ರವರು ಹೇಳಿದರು.
ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಸೆ.೨೧ ರಂದು ಸಂಭ್ರಮದ ಓಣಂ ಹಬ್ಬಾಚರಣೆಯಾಗಿದ್ದು, ಈ ಹಬ್ಬಾಚರಣೆಯ ಪ್ರಯುಕ್ತ ಕಾಲೇಜು ಪ್ರವೇಶ ದ್ವಾರ ಬಳಿ ನಿರ್ಮಿಸಲಾದ ‘ಪೂಕಳಂ’ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಬ್ಬವು ಸಿಹಿ, ಉಪ್ಪು, ಖಾರ, ಹುಳಿ, ಕಷಾಯ ಹೀಗೆ ಆರು ತರಹದ ರಸಗಳು ಸೇರಿ ಆರೋಗ್ಯ ಸಂಪೂರ್ಣತೆಯನ್ನು ಪಡೆಯುತ್ತದೆ ಎಂಬುದು ಇತಿಹಾಸ ಹೇಳುತ್ತದೆ. ಹೇಗೆ ಶಾಲೆಯಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಸಮವಸ್ತ್ರವಿದೆಯೋ ಹಾಗೆಯೇ ಈ ಓಣಂ ಹಬ್ಬದಲ್ಲಿ ಕೂಡ ಎಲ್ಲರೂ ಒಂದೇ ತೆರನಾದ ಸಮವಸ್ತ್ರವನ್ನು ಧರಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಎತ್ತಿ ತೋರಿಸಿಕೊಡುತ್ತದೆ ಎಂದರು.
ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸಾಗಬೇಕು-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ದೇವರ ನಾಡು ನೆರೆಯ ಕೇರಳ ರಾಜ್ಯದ ಈ ಹಬ್ಬವು ತುಳುನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಈ ಓಣಂ ಹಬ್ಬವನ್ನು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಈಗಾಗಲೇ ತೋರ್ಪಡಿಸಿದ್ದಾರೆ. ಕೇವಲ ಓದು ಬರಹ ಮಾತ್ರವಲ್ಲ, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದು ಮುಖ್ಯವಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ, ನಮ್ಮ ನೆರೆಯ ರಾಜ್ಯದ ಬಗ್ಗೆ, ನಮ್ಮ ನಾಡಿನ ಬಗ್ಗೆ ಪ್ರತಿಯೊಂದು ತಿಳಿಯುವವರಾಗಬೇಕು ಎಂದ ಅವರು ನಮ್ಮ ಹಿಂದಿನ ಕಾಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸಾಗಬೇಕು ಮಾತ್ರವಲ್ಲ ಜೀವನದಲ್ಲಿ ಸಫಲವಾಗುತ್ತಾರೆ. ಅಕ್ಷಯ ಕಾಲೇಜು ಓದಿನೊಂದಿಗೆ ಸಾಂಸ್ಕೃತಿಕ ಅಭಿಯಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಯಾಕೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದಾಗಿದೆ ಎಂದರು. 
ಎಲ್ಲಾ ಮತದವರು ಸೇರುವ ಆರಾಧನಾ ಕ್ಷೇತ್ರವೇ ವಿದ್ಯಾದೇಗುಲ-ಗೋಪಾಲಕೃಷ್ಣ ಕುಲಾಲ್:
ಮುಖ್ಯ ಅತಿಥಿ, ಬದಿಯಡ್ಕ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಂತಿಚ್ಚಾಲ್ ಮಾತನಾಡಿ,ಹಿಂದು ಧರ್ಮದಲ್ಲಿ ದೇವಸ್ಥಾನ, ಮುಸ್ಲಿಂ ಧರ್ಮದಲ್ಲಿ ಮಸೀದಿ, ಕ್ರೈಸ್ತ


Share with

Leave a Reply

Your email address will not be published. Required fields are marked *