ಕೊಚ್ಚಿ (ಕೇರಳ): ಇಲ್ಲಿಗೆ ಸಮೀಪದ ಪಟ್ಟಿಮಟ್ಟಂನಲ್ಲಿರುವ ಸರಕಾರಿ ಮದ್ಯದ ಅಂಗಡಿಯಲ್ಲಿ ಹಣ ನೀಡದೆ ಮದ್ಯದ ಬಾಟಲಿಯೊಂದಿಗೆ ಓಡಿಹೋಗಲು ಯತ್ನಿಸಿದ ಪೊಲೀಸ್ ಪೇದೆಯೊಬ್ಬ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಚಿಕೆಗೇಡಿನ ಘಟನೆ ನಡೆದಿದೆ.
ಪೊಲೀಸ್ ಇಲಾಖೆಯಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಿ ಎಂಬಾತ ಕೃತ್ಯ ಎಸಗಿದ್ದು, ಇಲಾಖೆಯನ್ನು ಮುಜುಗರಕ್ಕೀಡು ಮಾಡಿದ ಘಟನೆ ಭಾನುವಾರ(ಸೆ22) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ನೀಡದೆ ಕೌಂಟರ್‌ನಿಂದ ಓಡಿಹೋಗಲು ಯತ್ನಿಸಿದ ಪೇದೆಯನ್ನು ಮದ್ಯದಂಗಡಿಯ ನೌಕರರು ಬಲವಂತವಾಗಿ ತಡೆದಿರುವ ಸಿಸಿಟಿವಿ ದೃಶ್ಯಗಳನ್ನು ದೂರದರ್ಶನ ವಾಹಿನಿಗಳು ಸೋಮವಾರ ಪ್ರಸಾರ ಮಾಡಿವೆ.
ಪೊಲೀಸರ ಪ್ರಕಾರ,ಮದ್ಯದಂಗಡಿಯ ನೌಕರರು ಮತ್ತು ಪೊಲೀಸ್ ಪೇದೆಯ ನಡುವೆ ವಾಗ್ವಾದ ನಡೆದ ಬಳಿಕ ಹಣ ನೀಡದೆ ಮದ್ಯದ ಬಾಟಲಿಯೊಂದಿಗೆ ಓಡಿಹೋಗಲು ಪ್ರಯತ್ನಿಸಲಾಗಿದೆ.