ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿನಿಯೊಬ್ಬಳು ದೆಹಲಿಗೆ ಬಂದಿದ್ದಳು. ಅಲ್ಲಿನ ಶಕರ್ಪುರದಲ್ಲಿ ಮನೆಯೊಂದಕ್ಕೆ ಬಾಡಿಗೆಗೆಂದು ಹೋಗಿದ್ದಳು. ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆ ಮಾಲೀಕನ ಮಗ ವಾಸವಾಗಿದ್ದ. ಒಂದು ಬಾರಿ ಆಕೆ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುವಾಗ ಮನೆಯ ಕೀಗಳನ್ನು ಆತನಿಗೆ ಕೊಟ್ಟಿದ್ದಳು. ವಾಪಸ್ ಬಂದಾಗ ತನ್ನ ವಾಟ್ಸಾಪ್ ಬೇರೊಂದು ಲ್ಯಾಪ್ಟಾಪ್ನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತು ದಂಗಾಗಿದ್ದಳು. ತಕ್ಷಣವೇ ಆಕೆ ಲಾಗ್ಔಟ್ ಆಗಿದ್ದಳು.
ನಂತರ ಜಾಗೃತಳಾದ ಆಕೆ ತನ್ನ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎಂಬುದನ್ನು ಅರಿತಳು, ಯಾವುದೇ ಸಾಧನದ ಮೂಲಕ ತನ್ನ ಮೇಲೆ ನಿಗಾ ಇರಿಸಿರುಬಹುದು ಎಂದು ಕೊಠಡಿ ತುಂಬಾ ಹುಡುಕಾಟ ನಡೆಸಿದ್ದಾಳೆ. ಹೀಗಾಗಿ ಈ ವೇಳೆ ಕೊಠಡಿಯ ಬಾತ್ ರೂಂನ ಬಲ್ಬ್ ಹೋಲ್ಡರ್ ನಲ್ಲಿ ಕ್ಯಾಮೆರಾ ಅಳವಡಿಸಿರುವುದು ಕಂಡು ಪಿಸಿಆರ್ ಕರೆ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಮಹಿಳಾ ಸಬ್ ಇನ್ಸ್‌ಪೆಕ್ಟರ್ ನಿರುಪಮಾ ಅವರ ಮನೆಗೆ ಆಗಮಿಸಿ ಮತ್ತೆ ಮನೆಯನ್ನು ಹುಡುಕಿದಾಗ ಅವರ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.