ದುರಂತವನ್ನು ಬಯಸುವ ಎಡರಂಗ ಸರಕಾರದ ಆಡಳಿತ

Share with


ಮಂಜೇಶ್ವರ – ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರವು ರಾಜ್ಯದಲ್ಲಿ ಸದಾ ದುರಂತವನ್ನು ನಿರೀಕ್ಷಿಸುತ್ತಾ ಕಾಲ ಕಳೆಯುತ್ತಿದ್ದು, ಈ ಹೊಣೆಗೇಡಿ ಸರಕಾರವು ಭಾರತದ ಕೊನೆಯ ಎಡರಂಗ ಸರಕಾರ ಎಂದು ಇತಿಹಾಸದಲ್ಲಿ ಪರಿಗಣಿಸಲ್ಪಡಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಶ್ರೀ ಸುಬ್ಬಯ್ಯ ರೈ ಹೇಳಿದ್ದಾರೆ.
ಮಾಫಿಯಾಗಳಿಗೆ ನೇರ ಒತ್ತಾಸೆ ನೀಡುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ, ಗೃಹ ಇಲಾಖೆಯ ಅಪರಾಧೀಕರಣ ಕೊನೆಗೊಳಿಸಲು , ಹಾಗೂ ತೃಶ್ಶೂರ್ ಪೂರಂ ಉತ್ಸವವನ್ನು ಅಸ್ತವ್ಯಸ್ತಗೊಳಿಸಿದ ಸಂಚುಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ “ವಯನಾಡು ದುರಂತ ಪೀಡಿತರ ಹೆಸರಲ್ಲೂ ಸುಲಿಗೆ ನಡೆಸಲು ಹೇಸದ ಎಡರಂಗ ಸರಕಾರವು ನಾಡಿಗೆ ಹೊರೆಯಾಗಿ ಪರಿಣಮಿಸಿದೆ.  ಗಂಭೀರ ಪ್ರಕರಣಗಳಿಂದ ಮಗಳನ್ನು ರಕ್ಷಿಸುವುದು ಮತ್ತು  ಮಗಳ ಗಂಡನಿಗೆ ಮುಖ್ಯಮಂತ್ರಿ ಹುದ್ದೆ ಒದಗಿಸಿ ಕೊಡುವ ಪಿಣರಾಯಿಯ ಹಪಾಹಪಿಗೆ ದಾವೂದ್ ಇಬ್ರಾಹಿಂನನ್ನೂ ಮೀರಿಸುವ ಮಾಫಿಯಾಗಳು ಹಾಗೂ ಫ್ಯಾಸಿಸ್ಟ್ ಆರೆಸ್ಸೆಸ್ ಜೊತೆ ಏಕಕಾಲದಲ್ಲಿ ಡೀಲಿಂಗ್ ನಡೆಸಲು ಉನ್ನತ ಪೊಲೀಸ್ ಅಧಿಕಾರಿಗಳು ತಲೆಗೆ ಬಟ್ಟೆ ಹಾಕಿ ಓಡಾಟ ನಡೆಸುತ್ತಿದ್ದಾರೆ. 
ಈ ಮುಖ್ಯಮಂತ್ರಿ ರಾಜೀನಾಮೆ ನೀಡಿ ಮುಕ್ತ ತನಿಖೆಗೆ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
  ಕಾರ್ಯಕ್ರಮದಲ್ಲಿ ನೇತಾರರಾದ ಶ್ರೀ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ,ಕಮಲಾಕ್ಷಿ,ಶಾಂತಾ ಆರ್ ನಾಯ್ಕ್, ಖಲೀಲ್ ಬಜಾಲ್, ಮನ್ಸೂರ್ ಬಿ.ಎಂ, ಫ್ರಾನ್ಸಿಸ್ ಡಿ’ಸೋಜಾ, ಮುಹಮ್ಮದ್ ಮಜಾಲ್,ಕೆ.ಸದಾಶಿವ, ಪುರುಷೋತ್ತಮ ಅರಿಬೈಲ್, ದಾಮೋದರ ಮಾಸ್ಟರ್, ಬಾಬು ಬಂದ್ಯೋಡು, ಇರ್ಷಾದ್ ಮಂಜೇಶ್ವರ, ಜಗದೀಶ್ ಮೂಡಂಬೈಲು, ನಾಗೇಶ್ ಮಂಜೇಶ್ವರ,ಗೀತಾ ಬಂದ್ಯೋಡು, ಜೆಸ್ಸಿ ಕಣ್ವತೀರ್ಥ, ಹಮೀದ್ ಕಣಿಯೂರು, ಮೊಹಮ್ಮದ್ ಜೆ ಮುಂತಾದವರು ಉಪಸ್ಥಿತರಿದ್ದರು. ಶ್ರೀ ದಿವಾಕರ್ ಎಸ್.ಜೆ ಸ್ವಾಗತಿಸಿ, ಶ್ರೀ ಮುಹಮ್ಮದ್ ಸೀಗಂಡಡಿ ವಂದಿಸಿದರು.


Share with

Leave a Reply

Your email address will not be published. Required fields are marked *