ವಿಟ್ಲ: ಪುಣಚ ಕೋಟಿಚೆನ್ನಯ ಬಿಲ್ಲವ ಸಂಘದ ನೂತನ ಅಧ್ಯಕ್ಷರಾಗಿ ಪತ್ರಕರ್ತ ರಮೇಶ್ ಕೋಡಂದೂರು ಆಯ್ಕೆಗೊಂಡಿದ್ದಾರೆ.
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ಎಸ್ ಸಂಕೇಶ, ಕೋಶಾಧಿಕಾರಿಯಾಗಿ ಲೋಹಿತ್ ಎ.ಅಜ್ಜಿನಡ್ಕ
ಉಪಾಧ್ಯಕ್ಷರಾಗಿ ಹರೀಶ್ ಪಿ. ಪೊಯ್ಯಮೂಲೆ,
ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಆಜೇರು, ಗೌರವಾಧ್ಯಕ್ಷರಾಗಿ ನಾರಾಯಣ ಪೂಜಾರಿ ನೀರುಮಜಲು, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಸುಜನ್ ಎ. ಅಜ್ಜಿನಡ್ಕ, ಲೋಕೇಶ್ ಕುಟ್ಟಿತಡ್ಕ, ವಿಶ್ವಾಸ್ ಎಚ್. ಹಿತ್ತಿಲು, ನಾಗೇಶ್ ಕಲ್ಲಾಜೆ, ಅವಿನಾಶ್ ಬಳಂತಿಮುಗೇರು, ದಯಾನಂದ ಮೂಡಾಯಿಬೆಟ್ಟು, ದುರ್ಗಾ ಪ್ರಸಾದ್ ಸರವು, ಚಂದ್ರಶೇಖರ ಪೂಜಾರಿ ಮಲ್ಲಿಕಟ್ಟೆ, ಜಗದೀಶ ಪಾದೆಕಟ್ಟ, ಸುರೇಶ್ ದಲ್ಕಜೆ ಅವರನ್ನು ಆಯ್ಕೆಗೊಳಿಸಲಾಯಿತು. ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಶಿವಪ್ಪ ಪೂಜಾರಿ ನಾಟೆಕಲ್ಲು, ಗೌರವ ಸಲಹೆಗಾರ ವಿಶ್ವನಾಥ ಪೂಜಾರಿ ಕೂರೇಲು ಉಪಸ್ಥಿತರಿದ್ದರು.
ರಿದ್ವಿತ ಕೆ. ಪ್ರಾರ್ಥನೆ ಹಾಡಿದರು. ರವೀಂದ್ರ ಪೂಜಾರಿ ದಲ್ಕಜೆ ವಂದಿಸಿದರು. ಜಗನ್ನಾಥ ಸಂಕೇಶ ಕಾರ್ಯಕ್ರಮ ನಿರೂಪಿಸಿದರು.