ಮೈಸೂರಿನಲ್ಲಿ ಮಾತ್ರವಲ್ಲ, ಕರ್ನಾಟಕದ ಈ ಭಾಗದಲ್ಲೂ ದಸರಾ ಸಂಭ್ರಮ ಬಲು ಜೋರು

Share with

ಕರ್ನಾಟಕದ ನಾಡಹಬ್ಬವಾಗಿರುವ ದಸರಾವು ಹಿಂದೂ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ ಯಾಗಿ ಆಚರಿಸುವುದು ವಿಶೇಷವಾಗಿದೆ. ಕರ್ನಾಟಕದಲ್ಲಿ ವಿವಿಧ ರೀತಿಯಲ್ಲಿ ದಸರಾ ಆಚರಿಸಲಾಗುತ್ತದೆ. ಹೌದು, ಮೈಸೂರಿನಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿದೆಡೆಯಲ್ಲಿ ದಸರಾ ಸಂಭ್ರಮವು ಜೋರಾಗಿಯೇ ಇರುತ್ತದೆ.

ಮೈಸೂರು ದಸರಾ : ದಸರಾ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಮೈಸೂರು.1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ನವರಾತ್ರಿ ಉತ್ಸವ 1805ರಲ್ಲಿ ಯದುವಂಶದ ಅರಸರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತ್ತು. ತದನಂತರದಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ಸಂಭ್ರಮವು ಆರಂಭವಾಯಿತು ಆದರೆ ಇಂದು ಸರ್ಕಾರದ ಆಶ್ರಯದಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾವು ನಡೆಯುತ್ತದೆ. ಜಂಬೂ ಸವಾರಿ, ಮೈಸೂರು ಅರಮನೆ, ಫ಼ುಡ್ ಕಾರ್ನಿವಲ್, ಸೇನಾ ಮೆರವಣಿಗೆಗಳು, ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆಯುತ್ತದೆ. ಈ ವೈಭವದ ಉತ್ಸವವನ್ನು ನೋಡಲು ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ.

* ಮಡಿಕೇರಿ ವಿಶಿಷ್ಟ ದಸರಾಚರಣೆ : ಮೈಸೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಮಡಿಕೇರಿಯಲ್ಲಿಯೂ ವಿಭಿನ್ನವಾದ ನವರಾತ್ರಿ ಸಂಭ್ರಮವಿರುತ್ತದೆ. ಈ ಹಿಂದೆ ಹಾಲೇರಿ ವಂಶಸ್ಥರ ಆಳ್ವಿಕೆಯ ಸಂದರ್ಭದಲ್ಲಿ ಕೊಡಗಿನಲ್ಲಿ ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಉಂಟಾಗಿತ್ತು. ಹೀಗಾಗಿ ರಾಜರು ಶಕ್ತಿ ದೇವತೆ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದ್ದು, ಆ ಬಳಿಕ ಈ ಸಾವು ನೋವುಗಳು ದೂರವಾದವು. ಅಂದಿನಿಂದ ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಿಸುತ್ತಿದ್ದರು. ಅಂದಿನ ಆ ದಸರಾವು ಮಡಿಕೇರಿಯಲ್ಲಿ ದಸರಾ ನಡೆಯಲು ಕಾರಣವಾಯಿತು. ಈ ದಸರಾದ ವೇಳೆಯ ಕಾರ್ನೀವಲ್ ಆಚರಣೆಯನ್ನು ಮರಿಯಮ್ಮ ಹಬ್ಬ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಿಶಿಷ್ಟ ರೀತಿಯ ಜನಪದ ನೃತ್ಯಗಳು ಸೇರಿದಂತೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.


Share with

Leave a Reply

Your email address will not be published. Required fields are marked *