ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

Share with

ಹೊಸದಿಲ್ಲಿ: ಕೈಗಾರಿಕೋದ್ಯಮ ರಂಗದ ದಿಗ್ಗಜ ರತನ್ ಟಾಟಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಂಟು ಬಹಳಷ್ಟು ಗಾಢವಾದುದ್ದು, ಅವರ ನಡುವಿನ ಪರಸ್ಪರ ಗೌರವ ಎಷ್ಟರ ಮಟ್ಟಿಗೆ ಇತ್ತೆಂಬುದಕ್ಕೆ ಈ ಪ್ರಮುಖ ಘಟನೆಯೇ ಸಾಕ್ಷಿ. ವಿಶ್ವದ ಅತ್ಯಂತ ಅಗ್ಗದ ಕಾರು ಎಂದು ಬಿಂಬಿಸಲ್ಪಟ್ಟ ಇತಿಹಾಸದ ಪುಟದಲ್ಲಿ ದಾಖಲಾದ ಟಾಟಾ ನ್ಯಾನೋ ಯೋಜನೆಯನ್ನು 2008 ರಲ್ಲಿ ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಯಿತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ರತನ್ ಟಾಟಾ ಅವರಿಗೆ ಕಳುಹಿಸಿದ ಒಂದು ಪದದ SMS ಹೊಸ ಅಧ್ಯಾಯವನ್ನು ಪ್ರಾರಂಭಿಸಿತು.

2006 ರಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ, ಸಿಂಗೂರ್ ನಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಆಗಿನ ಆಡಳಿತಾರೂಢ ಎಡರಂಗ ಸರಕಾರದ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

ರತನ್ ಟಾಟಾ ಅವರು ಪಶ್ಚಿಮ ಬಂಗಾಳದಿಂದ ಟಾಟಾ ನ್ಯಾನೋ ಹೊರ ನಡೆಯುತ್ತಿರುವುದಾಗಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಭಾರವಾದ ಮನಸ್ಸಿನಲ್ಲಿ ಮಾತನಾಡುವ ವೇಳೆ ಮೋದಿ ಅವರು ಒಂದು SMS ಕಳುಹಿಸಿದ್ದರು. ಆ ಸಂದೇಶದಲ್ಲಿ ಕೇವಲ ”ಸ್ವಾಗತ” (welcome) ಎನ್ನುವುದು ಮಾತ್ರ ಬರೆಯಲಾಗಿತ್ತು.


Share with

Leave a Reply

Your email address will not be published. Required fields are marked *