ಬಿರುವೆರ್‌ ಕುಡ್ಲ ಹುಲಿವೇಷ ಕುಣಿತದ ಊದು ಪೂಜೆಯಲ್ಲಿ ಬಾಲಿವುಡ್‌ ಸ್ಟಾರ್..!‌ ಕಟೀಲು ದೇವಿಯ ಆಶೀರ್ವಾದ ಪಡೆದ ಸಂಜಯ್‌ ದತ್..!

Share with

ಕನ್ನಡದ ‘ಕೆಜಿಎಫ್’ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್​ನ ಸ್ಟಾರ್ ನಟ ಸಂಜಯ್ ದತ್ ಇದಗ ದಕ್ಷಿಣ ಕನ್ನಡಕ್ಕೆ ಕಾಲಿಟ್ಟಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಸಂಜಯ್ ದತ್, ಕಳೆದ ಕೆಲ ವರ್ಷಗಳಿಂದಲೂ ಧಾರ್ಮಿಕ ವ್ಯಕ್ತಿ ಆಗಿದ್ದಾರಂತೆ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುವ ಸಂಜಯ್ ದತ್. ಇಂದು (ಅಕ್ಟೋಬರ್ 12) ಕರ್ನಾಟಕದ ಪ್ರಸಿದ್ಧ ದೇವಾಲಯ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.‌

ತಮ್ಮ ಕೆಲವು ಗೆಳೆಯರ ಜೊತೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದಿದ್ದ ಸಂಜಯ್ ದತ್ ಅವರು ಮಂಗಳೂರಿನಲ್ಲಿ ನಡೆದ ಹುಲಿ ಕುಣಿತದ ಊದು ಪೂಜೆ ಯಲ್ಲಿ ಭಾಗವಹಿದರು. ಇದೇ ಪೂಜೆಯಲ್ಲಿ ಪಾಲ್ಗೊಳ್ಳಲೆಂದು ಸಂಜಯ್ ದತ್ ಅವರು ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಬಿರುವೆರ್ ಕುಡ್ಲ ಸಂಘಟನೆ ಆಯೋಜಿಸಿದ್ದ ಹುಲಿವೇಷ ಕುಣಿತದ ಊದು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ದೇವಾಲಯಕ್ಕೆ ಆಗಮಿಸಿದ್ದ ಸಂಜಯ್ ದತ್ ಅವರಿಗೆ ದೇವಸ್ಥಾನದ ವತಿಯಿಂದ ವಿಶೇಷ ಗೌರವ ಸಲ್ಲಿಕೆ ಮಾಡಲಾಯಿತು. ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಗೌರವಿಸಲಾಯ್ತು. ಸಂಜಯ್ ದತ್ ದೇವಾಲಯಕ್ಕೆ ಆಗಮಿಸಿದಾಗ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಬಿದ್ದರು.

ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಹಲವು ಸ್ಟಾರ್ ನಟ-ನಟಿಯರು ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಸಚಿನ್ ತೆಂಡೂಲ್ಕರ್ ನಿಂದ ಹಿಡಿದು ಹಲವಾರು ಮಂದಿ ಇಲ್ಲಿಗೆ ಬಂದು ವಿಶೇಷ ಪೂಜೆ ಮಾಡಿಸಿದ್ದಾರೆ. ಕೆಲ ವಾರದ ಹಿಂದೆಯಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಮಾಡಿಸಿದ್ದರು. ಕೆಎಲ್ ರಾಹುಲ್ ಸಹ ಬಂದು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುಂಚೆ ಯಶ್ ಬಂದಿದ್ದರು. ಜೂ ಎನ್​ಟಿಆರ್ ಸಹ ಬಂದಿದ್ದರು. ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಇನ್ನೂ ಹಲವರು ಈ ದೇವಾಲಯಕ್ಕೆ ಆಗಾಗ್ಗೆ ಬಂದು ಹೋಗುತ್ತಿರುತ್ತಾರೆ.


Share with

Leave a Reply

Your email address will not be published. Required fields are marked *