ರಾಮನಗರ: ಲೈಂಗಿಕ ಕ್ರಿಯೆಗೆ ಅಡ್ಡಿ ಆಗಿದ್ದಾರೆಂದು ಇಬ್ಬರು ಮಕ್ಕಳನ್ನು ತಾಯಿಯೊಬ್ಬಳು ಪ್ರಿಯಕರನ ಜೊತೆಗೆ ಸೇರಿ ಹತ್ಯೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕೆಂಪೇಗೌಡ ಸರ್ಕಲ್‌ನಲ್ಲಿ 3 ವರ್ಷದ ಕಬಿಲ್, 11 ತಿಂಗಳ ಕಬಿಲನ್ ಎಂಬ ಮಕ್ಕಳ ಹತ್ಯೆಯಾಗಿದೆ. ಸ್ವೀಟಿ ಎಂಬ ಮಹಿಳೆ ಶಿವು ಎಂಬಾತನನ್ನು ಮದುವೆಯಾಗಿದ್ದಳು. ಫ್ರಾನ್ಸಿಸ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಸ್ಮಶಾನಕ್ಕೆ ಹೆಣ ತಂದಾಗ ಅಲ್ಲಿನ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದು, ಸತ್ಯ ಹೊರಬಂದಿದೆ