ಕಾಸರಗೋಡು: ಶಿಕ್ಷಕಿ ಮಮತಾ ನೇಣು ಬಿಗಿದು ಆತ್ಮಹತ್ಯೆ

Share with

ಕಾಸರಗೋಡು: ಇಲ್ಲಿನ ನುಳ್ಳಿಪ್ಪಾಡಿ ನಿವಾಸಿ ಸುರೇಶ್‌ ಎಂಬವರ ಪತ್ನಿ ಚೈತನ್ಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದ ಮಮತಾ(42 ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಹಿಂದೆ ಹಲವು ವರ್ಷಗಳ ಕಾಲ ಕಾಸರಗೋಡಿನ ಲಕ್ಷ್ಮೀ ವೆಂಕಟೇಶ ವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದರು. ಮೃತ ಮಮತಾರವರು ಮಂಗಳೂರಿನಲ್ಲಿರುವ ತಾಯಿ ಮನೆಗೆ ತೆರಳಿದ್ದು ಸಂಜೆ ವೇಳೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನುಳ್ಳಿಪ್ಪಾಡಿಯ ಮನೆಗೆ ತಲುಪಿಸಿ ಚೆನ್ನಿಕ್ಕರೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮಮತಾರ ನಿಧನದ ಸುದ್ದಿ ತಿಳಿದು ವಿದೇಶದಲ್ಲಿದ್ದ ಪತಿ ಸುರೇಶ ಊರಿಗೆ ಆಗಮಿಸಿದ್ದಾರೆ. ಮೃತರು ಪತಿ, ಮಕ್ಕಳಾದ ವಿಷ್ಣು, ವೈಷ್ಣವಿ (ವಿದ್ಯಾರ್ಥಿಗಳು), ತಾಯಿ, ನಾಲ್ವರು ಸಹೋದರಿಯರು, ಇಬ್ಬರು ಸಹೋದರರ ಸಹಿತ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *