ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ನವೀಕರಣ ಕೆಲಸಗಳು ಪೂರ್ತಿಗೊಂಡು ಒಂದು ವಾರ ಕಳೆದರೂ ಇನ್ನೂ ತೆರೆಯದೆ ಇರುವುದು ಸಮಸ್ಯೆ ಉಂಟಾಗಿದ್ದು, ಕೂಡಲೇ ಕಾರ್ಯಚರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶೋಚನೀಯವಸ್ಥೆಯಲ್ಲಿದ್ದ ಶೌಚಾಲಯವನ್ನು ಪೈಪ್, ಟೈಲ್ಸ್, ವಿದ್ಯುತ್, ಪೈಟಿಂಗ್ ಸಹಿತ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಿ ನವೀಕರಣಗೊಳಿಸಲಾಗಿದೆ. ಪಂಚಾಯತ್ ಹಾಗೂ ಶುಚಿತ್ವ ಮಿಶನ್ ಜಂಟಿಯಾಗಿ ಸುಮಾರು 3ಲಕ್ಷ ರೂ ವೆಚ್ಚದಲ್ಲಿ ವಾರ್ಡ್ ಸದಸ್ಯ ಶರೀಫ್ ರವರ ನೇತೃತ್ವದಲ್ಲಿ ನವೀಕರಣ ಕೆಲಸಗಳು ನಡೆದಿದೆ. ಇನ್ನು ನೀರಿನ ವ್ಯವಸ್ಥೆಗೆ ಪೈಪ್ ಅಳವಡಿಸಲು ಬಾಕಿಯಿರುವುದಾಗಿ ತಿಳಿದುಬಂದಿದ್ದು, ಈ ಕೆಲಸ ಪೂರ್ತಿಗೊಳಿಸಿದ ಬಳಿಕವೇ ತೆರೆಯಲಾಗುವುದಾಗಿ ಹೇಳಲಾಗುತ್ತಿದೆ. ಉಪ್ಪಳ ಪೇಟೆಯಲ್ಲಿ ಬೇರೆ ಶೌಚಾಲಯಯಿಲ್ಲದೆ ಇರುವುದರಿಂದ ಸಾರ್ವಜನಿಕರು ತೀರಾ ಸಮಸ್ಯೆಗೀಡಾಗುತ್ತಿದ್ದಾರೆ. ಸಂಬoಧಪಟ್ಟ ಅಧಿಕೃತರು ಕೂಡಲೇ ಶೌಚಾಲಯವನ್ನು ತೆರೆಯ ಬೇಕೆಂದು ಸರ್ವಜನಿಕರು ಒತ್ತಾಯಿಸಿದ್ದಾರೆ.