ಉಪ್ಪಳ: ಕಯ್ಯಾರು ಸೊಂದಿ ಶ್ರೀ ದುರ್ಗಾಲಯದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ಇದರ ಸದಸ್ಯೆಯರಿಂದ ಮತ್ಸ್ಯಾ ವತಾರ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಮೇಶ ಭಟ್ ಪುತ್ತೂರು, ಚಂಡೆ, ಮದ್ದಳೆಯಲ್ಲಿ ಮಾ.ಸಮರ್ಥ ಉಡುಪ, ಮಾ. ತೇಜಸ್ ಬಲ್ಲಾಳ್, ಅರ್ಥಧಾರಿಗಳಾಗಿ ರಾಜಶ್ರೀ ನಾವಡ, ಜಯಲಕ್ಷ್ಮಿ ಮಯ್ಯ, ಸರಸ್ವತಿ ಹೊಳ್ಳ, ಲತಾ ನಾವಡ, ಜಯಲಕ್ಷ್ಮಿ ಕಾರಂತ ಭಾಗವಹಿಸಿದರು.