ಬೇರೆ ಶೂಗಳಿಗೆ ಹೋಲಿಸಿದರೆ “ನೈಕ್” ಶೂಗಳು ದುಬಾರಿ ಏಕೆ? ಏನಿದರ ವಿಶೇಷತೆಗಳು?

Share with

ನೈಕ್, ವಿಶ್ವದ ಅತ್ಯಂತ ಶ್ರೇಷ್ಠ ಬ್ರ್ಯಾಂಡ್ಗಳಲ್ಲಿ ಒಂದು. ಫುಟ್ವೇರ್ ಜಗತ್ತಿನಲ್ಲಿ ತನ್ನದೇ ಒಂದು ಛಾಪು ಮೂಡಿಸಿದ ಸಂಸ್ಥೆ ನೈಕ್. ಇದರ ವಿಭಿನ್ನ ಡಿಸೈನ್ಗಳು, ಸ್ಟೈಲ್ಗಳು ಜಗತ್ತಿನಾದ್ಯಂತ ಯುವಕ ಯುವತಿಯರನ್ನು ತನ್ನತ್ತ ಸೆಳೆಯುತ್ತವೆ. ಹಲವಾರು ದಶಕಗಳಿಂದ ಫುಟ್ವೇರ್ ಮಾರುಕಟ್ಟೆಯಲ್ಲಿ ತನ್ನದೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡಿದೆ ಈ ಬ್ರ್ಯಾಂಡ್. ಆದ್ರೆ ಈ ಒಂದು ಶೂಗಳು ಬೇರೆ ಶೂಗಳಿಗೆ ಹೋಲಿಸಿ ನೋಡಿದಾಗ ದುಬಾರಿ ಅನಿಸುತ್ತವೆ. ಸಾಮಾನ್ಯರ ಕೈಗೆಟುಕದ ರೀತಿಯಲ್ಲಿ ಇವುಗಳ ಬೆಲೆ ಇಲ್ಲ. ಅದಕ್ಕೆ ಹಲವು ಕಾರಣಗಳೂ ಕೂಡ ಇವೆ.

ಬ್ರ್ಯಾಂಡ್ ಮತ್ತು ಖ್ಯಾತಿ
ಈಗಾಗಲೇ ಹೇಳಿದಂತೆ ನೈಕ್ ಶೂಗಳು ಫುಟ್ವೇರ್ ಮಾರುಕಟ್ಟೆಯಲ್ಲಿ ತನ್ನದೇ ಒಂದು ಬ್ರ್ಯಾಂಡ್ ಸೃಷ್ಟಿಸಿಕೊಂಡಿದೆ. ಅದರ ಜೊತೆಗೆ ಖ್ಯಾತಿಯನ್ನು ಗಳಿಸಿಕೊಂಡಿದೆ. ಈ ಶೂಗಳನ್ನು ಧರಿಸಿದವರ ಇಮೇಜ್ ಬೇರೆಯದ್ದೇ ಎಂಬ ಮಟ್ಟಿಗೆ ತನ್ನ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸಿಕೊಂಡಿರುವ ಈ ಶೂಗಳು ಸಾಮಾನ್ಯವಾಗಿ ದುಬಾರಿಯೇ. ಒಂದು ಬಾರಿ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಸೃಷ್ಟಿಸಿಕೊಂಡ ಯಾವುದೇ ಸರಕಾಗಲಿ ಅದು ದುಬಾರಿಯ ಮಟ್ಟಕ್ಕೆ ಹೋಗುತ್ತದೆ. ಅತ್ಯುತ್ತಮ ಗುಣಮಟ್ಟದ ಸರಕು ಯಾವತ್ತಿಗೂ ಅತ್ಯುತ್ತಮ ಬೆಲೆಗೆ ಬಿಕರಿಯಾಗುತ್ತದೆ. ಇದು ಮಾರುಕಟ್ಟೆಯ ಅಘೋಷಿತ ನಿಯಮ. ಅದು ಮಾತ್ರವಲ್ಲ ನೈಕ್ ಗ್ರಾಹಕ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟವನ್ನು ಹೊಂದಿದ್ದು ಕೂಡ ಅದರ ದುಬಾರಿತನಕ್ಕೆ ಒಂದು ಕಾರಣ. ‘

ಸಂಶೋಧನೆ ಹಾಗೂ ಅಭಿವೃದ್ಧಿ
ಉತ್ತಮ ಗುಣಮಟ್ಟದ ಶೂಗಳನ್ನು ನೀಡಬೇಕು ಎಂಬ ಉದ್ದೇಶದಿಂದ ನೈಕ್ ಅತ್ಯುತ್ತಮ ಫುಟ್ವೇರ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡುತ್ತದೆ.ಉದಾಹರಣೆಗೆ ಏರ್, ಫ್ಲೈಕ್ನಿಟ್ ಹಾಗೂ ರಿಯಾಕ್ಟ್ ಟೆಕ್ನಾಲಜಿಗಳನ್ನು ಇದು ಅಳವಡಿಸಿಕೊಂಡಿದೆ. ಇಂತಹ ಪ್ರಯೋಗಗಳು ಹಾಗೂ ಸಂಶೋಧನೆಗಳು ಸಹಜವಾಗಿ ಉತ್ಪದನಾ ವೆಚ್ಚ (Cost Of Production)ವನ್ನು ಹೆಚ್ಚು ಮಾಡುತ್ತದೆ ಹೀಗಾಗಿಯೇ ಅದನ್ನು ಸರಿದೂಗಿಸಲು ಹೆಚ್ಚಿನ ಬೆಲೆಗಾಗಿ ತಮ್ಮ ಸರಕನ್ನು ಮಾರುವ ಅನಿವಾರ್ಯತೆಗೆ ಕಂಪನಿಗಳು ಬೀಳುತ್ತವೆ.

ಬಳಸುವ ಸಾಮಗ್ರಿಗಳ ಗುಣಮಟ್ಟ
ಇನ್ನು ನ್ಯಾಕ್ ಕಂಪನಿ ತನ್ನ ಶೂಗಳನ್ನು ತಯಾರಿಸಲು ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸುತ್ತದೆ. ಗ್ರಾಹಕರಿಗೆ ಆರಾಮದಾಯಕ ಫಿಲ್ ನೀಡಲು ಹಾಗೂ ಶೂ ಹಾಕಿಕೊಂಡಾಗ ಕಂಪ್ಲರ್ಟ ಎನಿಸಲು ಅತ್ಯುತ್ತಮವಾದ ಲೆದರ್, ಅಡ್ವಾನ್ಸ್ಡ್ ಸಿಂಥೆಟಿಕ್ ಸಾಮಗ್ರಿಗಳನ್ನು ಉಪಯೋಗಿಸುತ್ತದೆ. ಅದು ಮಾತ್ರವಲ್ಲ ನೈಕ್ ತನ್ನ ಶೂಗಳನ್ನು ಹವಾಮಾನ ಸ್ನೇಹಿಯನ್ನಾಗಿ ಉತ್ಪಾದಿಸುತ್ತದೆ.ಹೀಗಾಗಿ ಅತ್ಯುತ್ತಮ ಗುಣಮಟ್ಟದ ಶೂ ಉತ್ಪಾನೆಗೆ ತಗಲುವ ವೆಚ್ಚವೂ ಕೂಡ ದುಬಾರಿಯಾಗಿದ್ದು. ಇದರ ಮಾರಾಟದ ದರವೂ ಕೂಡ ಸಹಜವಾಗಿ ದುಬಾರಿಯಾಗುತ್ತದೆ.

ಮಾರ್ಕೆಟಿಂಗ್ ಹಾಗೂ ಅಡ್ವೆಟೈಸಿಂಗ್
ನೈಕ್ ತನ್ನ ಶೂಗಳ ಮಾರ್ಕೆಟಿಂಗ್ ಹಾಗೂ ಜಾಹಿರಾತುಗಳಿಗಾಗಿ ಸಾಕಷ್ಟು ಹಣವನ್ನು ವ್ಯಯ ಮಾಡುತ್ತದೆ. ಹೊಸ ವಿನ್ಯಾಸದ ಶೂಗಳನ್ನು ಸಿದ್ಧಗೊಳಿಸಿದಾಗಲೆಲ್ಲಾ ಅದನ್ನು ಪ್ರಮೋಟ್ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಸುರಿಯುತ್ತದೆ. ಅದರ ಗುಣಮಟ್ಟ ಹಾಗೂ ದೀರ್ಘಕಾಲ ಬಾಳಿಕೆಯ ಬಗ್ಗೆ ಗ್ರಾಹಕರಿಗೆ ತಿಳಿಸುವ ಉದ್ದೇಶದಿಂದಾಗಿ ಅದು ಸಾಕಷ್ಟು ಹಣವನ್ನು ಜಾಹಿರಾತುಗಳಿಗಾಗಿಯೇ ನೀಡುತ್ತದೆ ಹೀಗಾಗಿ ಈ ಶೂಗಳ ಬೆಲೆ ಕೊಂಚ ದುಬಾರಿ

ಬೇಡಿಕೆ ಮತ್ತು ಪೂರೈಕೆ
ಒಂದು ವಸ್ತುವಿನ ಅಥವಾ ಒಂದು ಉತ್ಪನ್ನದ ಬೆಲೆಯನ್ನು ಸ್ಪಷ್ಟವಾಗಿ ನಿರ್ಧರಿಸುವುದ ಪೂರೈಕೆ ಹಾಗೂ ಬೇಡಿಕೆಯಲ್ಲಿರುವ ವ್ಯತ್ಯಾಸಗಳು. ಬೇಡಿಕೆ ಹೆಚ್ಚಿದ್ದು ಅದಕ್ಕೆ ತಕ್ಕಹಾಗೆ ಪೂರೈಕೆ ಇಲ್ಲದಿದ್ದಾಗ ಆ ಉತ್ಪನದ ಬೆಲೆ ಹೆಚ್ಚಾಗುತ್ತದೆ ಅನ್ನೋದು ಅರ್ಥಶಾಸ್ತ್ರದ ಮೊದಲ ಪಾಠ. ವಿಶ್ವದಾದ್ಯಂತ ನೈಕ್ ಶೂಗಳಿಗೆ ಭಾರೀ ಡಿಮ್ಯಾಂಡ್ ಇದೆ. ಬೇಡಿಕೆಗೆ ತಕ್ಕಂತೆ ತಮ್ಮ ಶೂಗಳನ್ನು ಪೂರೈಸುವುದರಲ್ಲಿ ನೈಕ್ಗೆ ಸಾಧ್ಯವಾಗುತ್ತಿಲ್ಲ ಹೀಗಾಗಿ ಇದರ ಬೆಲೆ ಬೇರೆ ಶೂಗಳಿಗೆ ಹೋಲಿಸಿದಾಗ ಕೊಂಚ ಹೆಚ್ಚು ಅನಿಸುತ್ತದೆ.


Share with

Leave a Reply

Your email address will not be published. Required fields are marked *