ಬರೀ 20 ನಿಮಿಷ ಚಾರ್ಜ್ ಮಾಡಿ 200km ಓಡಿಸಿ..! ಬೆಂಗಳೂರಿಗರಿಗೆ ಇದು ಹೇಳಿ ಮಾಡಿಸಿದ ಬೈಕ್

Share with



ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಎಲ್ಲರ ಚಿತ್ತ ಅದರತ್ತ ನೆಟ್ಟಿದೆ. ಕಡಿಮೆ ಖರ್ಚಿನಲ್ಲಿ ಸುಖಕರ ಪ್ರಯಾಣವನ್ನು ಎಲೆಕ್ಟ್ರಿಕ್ ವಾಹನ ಒದಗಿಸುತ್ತದೆ. ಸದ್ಯ ಭಾರತದಲ್ಲಿ ನಾನಾ ಕಂಪನಿಗಳು ಅತಿ ಕಡಿಮೆ ಸಮಯದಲ್ಲಿ ಚಾರ್ಜಿಂಗ್ ಮತ್ತು ಹೆಚ್ಚಿನ ಮೈಲೇಜ್ ಒದಗಿಸುವ ವಾಹನವನ್ನ ಪರಿಚಯಿಸುತ್ತಿದೆ. ಅದರಂತೆಯೇ ಚೆನ್ನೈ ಮೂಲದ ಸ್ಟಾರ್ಟ್ಅಪ್ Raptee.HV ದೇಶಿಯ ಮಾರುಕಟ್ಟೆಗೆ ಹೈ-ಮೋಲ್ಟೇಜ್ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

ನೂತನ ಬೈಕ್ 250-300 ಸಿಸಿಯನ್ನು ಹೊಂದಿದ್ದು, ಪೆಟ್ರೋಲ್ ಬೈಕ್ಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದೆ. ಅಂದಹಾಗೆಯೇ Raptee.HV ಪರಿಚಯಿಸಿರುವ ಬೈಕ್ ಸಾರ್ವತ್ರಿಕ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರುವ ದೇಶದ ಮೊದಲ ಮಾದರಿಯಾಗಿದೆ. ಇವುಗಳನ್ನು ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುತ್ತದೆ.

ಅಂದಹಾಗೆಯೇ ನೂತನ ಬೈಕ್ ಅನ್ಬೋರ್ಡ್ ಚಾರ್ಜರ್ನೊಂದಿಗೆ ಬರುತ್ತದೆ. CC52 ಕಾರು ಚಾರ್ಜಿಂಗ್ ಸ್ಟೇಷನ್ಗಳಲ್ಲಿಯೂ ಲಭ್ಯವಿದೆ. ಇನ್ನು ನೋಟ ಮತ್ತು ವಿನ್ಯಾಸದಲ್ಲಿ ವಿಭಿನ್ನ ಲುಕ್ ಹೊಂದಿದೆ. ಬೈಕ್ನ ಹೆಚ್ಚಿನ ಭಾಗವನ್ನು ಮುಚ್ಚಲಾಗಿದೆ. ಇದರಲ್ಲಿ ಎಲ್ಇಡಿ ಹೆಡ್ಲೈಟ್, ಟಚ್ಸ್ಕ್ರೀನ್ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಡಿಸ್ಪ್ಲೇನಲ್ಲಿ ವೇಗ ಬ್ಯಾಟರಿ, ಸಮಯ, ಸ್ಟ್ಯಾಂಡ್, ಬ್ಲೂಟೂತ್ ಕನೆಕ್ಟಿವಿಟಿ, ಜಿಪಿಎಸ್ ನ್ಯಾವಿಗೇಷನ್ ಮುಂತಾದ ಮಾಹಿತಿಯನ್ನು ಒದಗಿಸುತ್ತದೆ.

ನೂತನ ಬೈಕ್ನಲ್ಲಿ 5.4kWh ಸಾಮರ್ಥ್ಯದ 240 ವೋಲ್ಡ್ ಬ್ಯಾಟರಿಯನ್ನು ನೀಡಲಾಗಿದೆ. ಒಂದೇ ಚಾರ್ಜ್ನಲ್ಲಿ 200 ಕಿಮೀ ಕ್ರಮಿಸುತ್ತದೆ. ಬೈಕಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 22kw ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 30BHP ಪವರ್ ಮತ್ತು 70 ನ್ಯೂಟನ್ ಮೀಟರ್ ಟಾರ್ಕ್ಗೆ ಸಮನಾಗಿದೆ ಎಂದು ಕಂಪನಿ ಹೇಳಿದೆ.

ಇನ್ನು Raptee.HV ಪರಿಚಯಿಸಿರುವ ಬೈಕ್ 3.6 ಸೆಕೆಂಡ್ಗೆ 0 ರಿಂದ 60kmph ವೇಗವನ್ನು ಪಡೆಯುತ್ತದೆ. ಗಂಟೆಗೆ 135 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ. ಈ ಬೈಕ್ನಲ್ಲಿ ಮೂರು ಬಿಭಿನ್ನ ರೈಡಿಂಗ್ ಮೋಡ್ ನೀಡಲಾಗಿದೆ.

ಟ್ಯೂಬ್ಲೆಸ್ ಟಯರ್, ಆರಾಮ ಮತ್ತು ಸುರಕ್ಷಿತವಾದ ಸೀಟ್, ಮುಂಭಾಗ 320 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗ 230 ಎಂಎಂ ಡಿಸ್ಕ್ ಬ್ರೇಕ್, ಡ್ಯುಯೆಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ.

ಗ್ರಾಹಕರಿಗಾಗಿ ಕಂಪನಿಯು ಈ ಬೈಕನ್ನು 2.39 ಲಕ್ಷ ರೂಪಾಯಿಗೆ ಪರಿಚಯಿಸಿದೆ. ಬಿಳಿ, ಕೆಂಪು, ಕಪ್ಪು, ಬೂದು ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ. 1 ಸಾವಿರ ರೂಪಾಯಿ ನೀಡಿ ಬೈಕ್ ಬುಕ್ಕಿಂಗ್ ಮಾಡುವ ಆಯ್ಕೆಯೂ ಇದೆ. ಬೆಂಗಳೂರು ಮತ್ತು ಚೆನ್ನೈ ಗ್ರಾಹಕರು ಬೇಗ ವಿತರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.


Share with

Leave a Reply

Your email address will not be published. Required fields are marked *