ನೃತ್ಯ ಕಲಾವಿದರ ಒಕ್ಕೂಟ (ರಿ )ದಕ್ಷಿಣ ಕನ್ನಡ ಉದ್ಘಾಟನಾ ಸಮಾರಂಭ

Share with

ಬಂಟ್ವಾಳ:ನೃತ್ಯ ಕಲಾವಿದರ ಒಕ್ಕೂಟ (ರಿ )ದಕ್ಷಿಣ ಕನ್ನಡ  ಇದರ ಉದ್ಘಾಟನಾ ಸಮಾರಂಭ ಕಲ್ಲಡ್ಕ ಕೆ ಟಿ ಹೋಟೆಲ್ ಲಕ್ಷ್ಮಿ ನಿವಾಸ ಸಭಾ ಭವನದಲ್ಲಿ ಜರಗಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಯಕ್ಷಬೊಳ್ಳಿ ದಿನೇಶ್ ರೈ ಕಡಬ. ಉದ್ಘಾಟಿಸಿ ಮಾತನಾಡಿ  ನೃತ್ಯ ಅನ್ನೋದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಈ ನಿಟ್ಟಿನಲ್ಲಿ ನೃತ್ಯ ಕಲಾವಿದರಿಗೆ  ಸಿಗುವಂತ ಸೌಲಭ್ಯಗಳನ್ನು ಪಡೆಯಲು ನೃತ್ಯ ಕಲಾವಿದರ  ಸಂಘಟನೆ ಬಹಳ ಅಗತ್ಯ, ಈ ಮೂಲಕ ನೃತ್ಯ ಕಲಾವಿದರ ಧ್ವನಿಯಾಗಿ ತಮಗೆ ನ್ಯಾಯಯುತವಾಗಿ ಸಿಗುವ ಸೌಲಭ್ಯವನ್ನು ಪಡೆಹಲು ಸಹಕಾರಿಯಾಗುತ್ತೆ ಅಂದರು.

ಉದ್ಯಮಿ ಕಿಶೋರ್ ಕುಮಾರ್ ಕಟ್ಟೆಮಾರು ನೃತ್ಯ ಕಲಾವಿದರ ಒಕ್ಕೂಟ (ರಿ )ದಕ್ಷಿಣ ಕನ್ನಡದ ಲಾಂಛನ ಬಿಡುಗಡೆ ಮಾಡಿ ಶುಭ ಹಾರೈಸಿ ಯಾವುದೇ ಒಕ್ಕೂಟ ಪ್ರಾರಂಭ ಮಾಡುವುದು ಸುಲಭ ಆದರೆ ಮುಂದುವರಿಸುವುದು ಬಹಳ ಕಷ್ಟ. ಈ ನಿಟ್ಟಿನಲ್ಲಿ ನೃತ್ಯ ಕಲಾವಿದರ ಒಕ್ಕೂಟವು ಒಂದು ಮಾದರಿ ಒಕ್ಕೂಟವಾಗಲಿ, ತನ್ನಿಂದ ಹಾಗೂ ತಮ್ಮ ಕಟ್ಟೆಮಾರುಕ್ಷೇತ್ರದ ವತಿಯಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಯಿದೆ ದೆವುಸ್ ಅನುದನಿತಾ ಹಿರಿಯ ಪ್ರಾಥಮಿಕ ಶಾಲೆಯಮುಖ್ಯ ಶಿಕ್ಷಕಿ ಜಾನೆಟ್ ಡಿ ‘ಸೋಜ,  
ಜಿಲ್ಲಾ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ  ಆರ್ ಕೆ  ಕಲಾ ಸಂಸ್ಥೆಯ   ರಾಜೇಶ್ ವಿಟ್ಲ,
ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು,
ಮನೀಶ್ ಶೆಟ್ಟಿ ಉಪ್ಪಿರ,
ಚಲನಚಿತ್ರ ಚಿತ್ರ ನಟಿ. ಶೈಲಶ್ರೀ ಮೂಲ್ಕಿ, ಮಾಡೆಲ್ ಕುಮಾರಿ ಅಖಿಲ ಪೂಜಾರಿ, ಗೊಂಬೆ ಬಳಗ ಒಕ್ಕೂಟದ ಕೋಶಾಧಿಕಾರಿ ನವೀನ್ ಕಲ್ಲಡ್ಕ,ಮುರಳಿ ಪುತ್ತೂರು,ಸಂಗಮ್ ಡಾನ್ಸ್. ಬೋಳ್ವರ್ ಪ್ರಶಾಂತ್,ನಿಶಾನಿ ಡಾನ್ಸ್ ಗ್ರೂಪ್ ದಿನೇಶ್ ಅಮೀನ್ ನರಿಕೊಂಬು, ಮೊದಲಾದವರು ಉಪಸ್ಥಿತರಿದ್ದರು.

ಮಯೂರ ಕಲಾ ಸಂಸ್ಥೆ ನೃತ್ಯ ನಿರ್ದೇಶಕ ಮೋಹನ್ ಅಲಂಕಾರು ಸ್ವಾಗತಿಸಿ,
ಮೇಘ ಕಲಾ ಆರ್ಟ್ಸ್ ಡಾನ್ಸ್ ಸ್ಟುಡಿಯೋ ಇದರ ಶಾರದಾ ದಾಮೋದರ ಅರತ್ತೋಳಿ, ಕಾರ್ಯಕ್ರಮದ ಪ್ರಾಸ್ತವಿಕ ಮಾಡಿ,ಗೊಂಬೆ ಕುಣಿತ ಕಲಾವಿದರನ್ನು ಈ ಒಕ್ಕೂಟದಲ್ಲಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ ಎಂದರು.

ನೃತ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ  ವೀ ಜಿ ರೋಕಾರ್ಸ್. ಡಾನ್ಸ್ ಅಕಾಡೆಮಿ ಕಡೆಶಿವಾಲಯ ನೃತ್ಯ ನಿರ್ದೇಶಕ ಚಂದ್ರೋದಯ ಕುಲಾಲ್ ವಂದಿಸಿದರು.
ಚಿಂತಾಮಣಿ ಡಾನ್ಸ್ ಅಕಾಡೆಮಿ ಕಡೆಶಿವಾಲಯದ ನೃತ್ಯ ನಿರ್ದೇಶಕ ಮಹೇಶ್ ಕುಲಾಲ್. ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *