ಬಳಕೆಯಲ್ಲಿರುವ ರಕ್ತದೊತ್ತಡದ ಔಷಧಕ್ಕಿಂತ ಹೊಸ 3-ಇನ್-1 ಔಷಧಿ ಹೆಚ್ಚು ಪರಿಣಾಮಕಾರಿ, ಅಧ್ಯಯನದಲ್ಲಿ ಬಹಿರಂಗ

Share with

ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದ ಅಧಿಕ ರಕ್ತದೊತ್ತಡ ಪ್ರಸ್ತುತ ಅನೇಕರನ್ನು ಪೀಡಿಸುತ್ತಿರುವ ಕಾಯಿಲೆಯಾಗಿದೆ. ಈ ಕಾಯಿಲೆಯೂ ಒಮ್ಮೆ ಬಂದರೆ ಸಾಕು, ಜೀವನ ಪರ್ಯಂತ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇದೀಗ ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್ ಮೂರು ಔಷಧಗಳ ಸಂಯೋಜನೆಗಳನ್ನೊಳಗೊಂಡ GMRx2 ಹೊಸ ಟ್ರಿಪಲ್ ಸಂಯೋಜಿತ ಔಷಧವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.

ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಅದರ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, “ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್‌ನ ಕಡಿಮೆ-ಡೋಸ್ ಏಕ-ಮಾತ್ರೆ ಸಂಯೋಜನೆಗಳ (SPC) ಉತ್ಪನ್ನವು ಈ ಎರಡು ಸಂಯೋಜನೆಗಳಿಗೆ ಹೋಲಿಸಿದರೆ ರಕ್ತದೊತ್ತಡ ಕಡಿಮೆ ಮಾಡುವಲ್ಲಿ GMRx2 ಹೊಸ ಔಷಧವು ಪರಿಣಾಮಕಾರಿಯಾಗಿದೆ. ಈ ಹೊಸ ಅಧ್ಯಯನವು ಭಾರತೀಯರಿಗೆ ಬಹಳಷ್ಟು ಅನುಕೂಲಕರವಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ ಭಾರತದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಅಂದಾಜು 22 ಕೋಟಿ ಜನರಲ್ಲಿ, ಕೇವಲ 12 ಪ್ರತಿಶತದಷ್ಟು ಜನರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣವನ್ನು ಹೊಂದಿದ್ದಾರೆ. ಬೇರೆ ಆರೋಗ್ಯ ಸಮಸ್ಯೆಗಳಿಗಿಂತ ಅಧಿಕ ರಕ್ತದೊತ್ತಡವು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಆದರೆ ಈ ಹೊಸ ಟ್ರಿಪಲ್ ಸಿಂಗಲ್ ಮಾತ್ರೆಗಳು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ ಎನ್ನುವುದು ದೃಢವಾಗಿದೆ.


Share with

Leave a Reply

Your email address will not be published. Required fields are marked *