ಆರೋಗ್ಯ ಚೆನ್ನಾಗಿದ್ದರೆ ದೊಡ್ಡ ಸಂಪತ್ತು ಜೊತೆಯಲ್ಲಿ ಇದ್ದಂತೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಹಾಗಾಗಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಡದಿರಲು ಅನೇಕ ರೀತಿಯಲ್ಲಿ ಕಾಳಜಿ ವಹಿಸುತ್ತೇವೆ. ಅದರಲ್ಲಿ ಉಗುರು ಬೆಚ್ಚಗಿನ ನೀರಿನ ಸೇವನೆಯೂ ಸೇರಿದೆ. ನಾವು ಅನೇಕ ಬಾರಿ ಉಗುರು ಬೆಚ್ಚಗಿರುವ ನೀರನ್ನು ಸೇವಿಸುತ್ತೇವೆ. ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರು ಕಡಿಮೆ ನೀರು ಕುಡಿಯುತ್ತಾರೆ. ಆದರೂ ಬಿಸಿನೀರು ಕುಡಿಯುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ದೇಹದ ಅಗತ್ಯಗಳು ವಿಭಿನ್ನವಾಗಿರಬಹುದು. ಕೆಲವರು ಬಿಸಿನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಎಲ್ಲರಿಗೂ ಒಂದೇ ರೀತಿಯ ಪರಿಣಾಮಗಳನ್ನು ಬೀರುವುದಿಲ್ಲ ಹಾಗಾಗಿ ಯಾವ ರೀತಿಯ ಆರೋಗ್ಯ ಸಮಸ್ಯೆ ಇರುವವರು ಇದನ್ನು ಕುಡಿಯಬಾರದು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.
- ಸಾಮಾನ್ಯವಾಗಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ರೋಗಿಗಳು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಇವು ಗಂಟಲಿನಲ್ಲಿ ಊತ ಮತ್ತು ಉರಿಯೂತವನ್ನು ಹೆಚ್ಚಿಸುತ್ತದೆ, ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಬದಲಾಗಿ ಅವರು ಬೆಚ್ಚಗಿನ ನೀರನ್ನು ಕುಡಿಯಬೇಕು, ಇದು ಅವರ ಗಂಟಲಿಗೆ ಒಳ್ಳೆಯದು.
- ಚಿಕ್ಕ ಮಕ್ಕಳು ವಯಸ್ಕರಂತೆ ಬಿಸಿನೀರನ್ನು ಕುಡಿಯಬಾರದು. ಏಕೆಂದರೆ ಅವರ ಜೀರ್ಣಾಂಗ ವ್ಯವಸ್ಥೆ ದೊಡ್ಡವರಂತಲ್ಲ ಅದು ತುಂಬಾ ಸೂಕ್ಷ್ಮವಾಗಿರುತ್ತದೆ. ಬಿಸಿನೀರನ್ನು ಸೇವಿಸುವುದರಿಂದ ಅವರ ಹೊಟ್ಟೆಗೆ ಹಾನಿಯಾಗುತ್ತದೆ. ಹಾಗಾಗಿ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು ಇಲ್ಲದಿದ್ದರೆ ಅವರು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
- ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿರುವವರು ಬಿಸಿ ನೀರನ್ನು ತಪ್ಪಿಸಬೇಕು ಏಕೆಂದರೆ ಇದು ಅವರ ಯಕೃತ್ತಿನ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಹಾಗಾಗಿ ಅವರು ತಣ್ಣೀರು ಕುಡಿಯುವುದು ಒಳ್ಳೆಯದು. ಜೊತೆಗೆ ವೈದ್ಯರ ಸಲಹೆಯಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಪಿತ್ತಜನಕಾಂಗವು ಬಹಳ ಸೂಕ್ಷ್ಮ ಅಂಗವಾಗಿದೆ, ಅದರಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ದೇಹದ ವಿವಿಧ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.
- ಚರ್ಮದ ಸೂಕ್ಷ್ಮತೆ ಅಥವಾ ಅಲರ್ಜಿ ಹೊಂದಿರುವವರಿಗೆ ಬಿಸಿ ಮತ್ತು ತುಂಬಾ ತಂಪಾದ ನೀರು ಹಳೆಯ ನೋವನ್ನು ಹೆಚ್ಚಿಸಬಹುದು. ಸಮಸ್ಯೆ ಹೆಚ್ಚಿಸಲು ಬಯಸದಿದ್ದರೆ ಕಾಯಿಸಿ ಆರಿಸಿದ ನೀರು ಕುಡಿಯಿರಿ.