ಗದಗ, ಅಕ್ಟೋಬರ್ 26: ಉತ್ತರ ಕರ್ನಾಟಕದಲ್ಲಿ ರೊಟ್ಟಿ ತಿಂದರೆ ಗಟ್ಟಿ ಆಗುತ್ತಾರೆ ಎಂಬ ಮಾತಿದೆ. ಆದರೆ, ಸರ್ಕಾರ ಕೊಡುವ ಜೋಳದ ರೊಟ್ಟಿ ತಿಂದರೆ ಆಸ್ಪತ್ರೆ ಅಂತೂ ಗ್ಯಾರಂಟಿ. ದನಗಳು ಕೂಡ ತಿನ್ನದಂಥ ಕೆಟ್ಟ ಕಳಪೆ ಜೋಳವನ್ನು ಬಡವರಿಗೆ ಸರ್ಕಾರ ನೀಡುತ್ತಾ ಇದೆ ಎಂಬ ಆರೋಪ ಕೇಳಿಬಂದಿದೆ. ಇದು ಬಡವರಿಗಾಗಿ ಕಾಂಗ್ರೆಸ್ ಸರ್ಕಾರ ನೀಡಿದ ‘ಗ್ಯಾರಂಟಿ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಬೆಸ್ಟ್ ಕೆಲಸ ಎಂದು ಸರ್ಕಾರದ ವಿರುದ್ಧ ವೃದ್ಧೆಯೊಬ್ಬರು ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡಿತರ ಅಂಗಡಿ ಮಾಲೀಕರು ದೂಳು, ಕಸ, ಜಿಡ್ಡು ಹಿಡಿದ ಜೋಳ ವಿತರಣೆ ಮಾಡುತ್ತಿದ್ದಾರೆ. ಕಳಪೆ ಜೋಳ ನೋಡಿ ಬಡ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ವಿದ್ಯಮಾನ ನಡೆದಿದೆ. ಜೋಳದ ಚೀಲದಲ್ಲಿ ಬರೀ ಕಸ, ಕಡ್ಡಿ, ಹೊಟ್ಟು ಭರ್ಜರಿಯಾಗಿದೆ. ತಿನ್ನಲು ಯೋಗ್ಯವಲ್ಲದ ಕಳಪೆ ಜೋಳ ವಿತರಣೆ ಮಾಡಲಾಗುತ್ತಿದೆ. ಕಳಪೆ ಜೋಳ ವಿತರಣೆ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಹಾರ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಸಾರ್ವಜನಿಕರು ಆಹಾರ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನ್ಯಾಯಬೆಲೆ ಅಂಗಡಿ ಅವರನ್ನು ಪ್ರಶ್ನಿಸಿದಾಗ, ಸರ್ಕಾರ ಏನು ಕೊಟ್ಟಿದೆಯೋ ಅದನ್ನು ನಾವು ಕೊಡುತ್ತೇವೆ ಅಷ್ಟೆ ಎಂದಿದ್ದಾರೆ. ಮತ್ತೊಂದೆಡೆ, ಸರ್ಕಾರ ನೀಡಿದ ಜೋಳದ ರೊಟ್ಟಿ ತಿಂದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ ಅಂತ ಸರ್ಕಾರದ ವಿರುದ್ಧ ಬಡ ಮಹಿಳೆಯರು ಕಿಡಿಕಾರಿದ್ದಾರೆ.